logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು *ಕಬ್ಬಿನ ಬಿಲ್ ನಿಗದಿಗೆ ಪಟ್ಟು ಸರ್ಕಾರಕ್ಕೆ ಅರೆಬೆತ್ತಲೆ ಬಿಸಿಮುಟ್ಟಿಸಿದ ಅನ್ನದಾತರು* ಅಥಣಿ ತಾಲೂಕ ದಂಡಾಧಿಕಾರಿಗೆ ಮನವಿ ಸಲ್ಲಿಸಲಾಯಿತು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು *ಕಬ್ಬಿನ ಬಿಲ್ ನಿಗದಿಗೆ ಪಟ್ಟು ಸರ್ಕಾರಕ್ಕೆ ಅರೆಬೆತ್ತಲೆ ಬಿಸಿಮುಟ್ಟಿಸಿದ ಅನ್ನದಾತರು* ಅಥಣಿ ತಾಲೂಕ ದಂಡಾಧಿಕಾರಿಗೆ ಮನವಿ ಸಲ್ಲಿಸಲಾಯಿತು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ


*ಸುಡು ಬಿಸಿಲಿನಲ್ಲಿ ಬೀದಿಗಿಳಿದ ರೈತರು ಸರ್ಕಾರದ ವಿರುದ್ಧ ಆಕ್ರೋಶ.!*
ಅಥಣಿ ಅಂಬೇಡ್ಕರ್ ಸರ್ಕಲ್ ತಾತ್ಕಾಲಿಕ ಬಂದ್. ರೈತ ಸಂಘದಿಂದ ಕಬ್ಬಿನದರ ಸಲುವಾಗಿ


ಕಬ್ಬಿನ ಬಿಲಗೆ ರೈತರ ಪಟ್ಟು ಕಬ್ಬಿನ ಬಿಲ್ ನಿಗದಿ ಮಾಡಿ ಆಮೇಲೆ ಫ್ಯಾಕ್ಟರಿ ಚಾಲುಮಾಡಿ..!!

ಕಬ್ಬಿನ ಬಿಲಗೆ ರೈತರ ಪಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ, ವಿಧಾನ ಸೌಧ, ಬೆಂಗಳೂರು.

ತಾಲೂಕಾ ದಂಡಾಧಿಕಾರಿಗಳ ಮುಖಾಂತರ.

ಮಾನ್ಯರೆ,

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಅಥಣಿ ವತಿಯಿಂದ ಕೇಳಿಕೊಳ್ಳುವುದೇನೆಂದರೆ-

ಮಾನ್ಯರೆ ನಾವು ರೈತರು ಬೆಳೆದ ಬೆಳೆಗಳಿಗೆ 10 ವರ್ಷದಿಂದ ಒಂದೇ ರೇಟ ಇದ್ದು ಆದರೆ ನಾವು ಬಳಸುವ ದಿನ ಬಳಕೆ ವಸ್ತುಗಳು, ಗೊಬ್ಬರ, ಕೂಲಿ, ಸಾಗಾಣಿಕೆ ಹೀಗೆ ಹಲವಾರು ವಸ್ತುಗಳ ಬೆಲೆಯು 10 ವರ್ಷದಲ್ಲಿ ನಾಲೈದು ಪಟ್ಟು ದರ ಹೆಚ್ಚಾಗುತ್ತಾ ಬಂದಿರುವದರಿಂದ ನಾವು ಬೆಳೆದಂತ ಬೆಳೆಗೆ ಯೋಗ್ಯ ಬೆಲೆಯನ್ನು ಕೊಡಲೇಬೇಕೆಂದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಹಕ್ಕೊತ್ಯಾಯ ಮಾಡುತ್ತಿದ್ದೇವೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಅಥಣಿಯಿಂದ ಆಗ್ರಹಿಸುತ್ತೇವೆ.

1) ಗೋವಿನ ಜೋಳ (ಗೊಂಜಾಳ)ಗೆ ತತಕ್ಷಣ ಸರಕಾರ ಖರೀದಿ ಕೇಂದ್ರವನ್ನು ತಗೆಯಬೇಕು.

2) ಒಂದು ಟನ್ ಕಬ್ಬಿಗೆ ಕಾರ್ಖಾನೆಯ ಮಾಲಿಕರು 3500+ಸರಕಾರದಿಂದ 1000 ಒಟ್ಟು ರೂ.4,500/-ರೈತರಿಗೆ ಕೊಡಬೇಕು (ಸಾಗಾಣಿಕೆ & ಕಟಾವು ಹೊರತುಪಡಿಸಿ).

3) ರೈತರು ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ರೈತರಿಗೆ ಕಾರ್ಖಾನೆಗಳಿಂದ ಹಣ ಸಂದಾಯ ಆಗಬೇಕು.

4) ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಕಬ್ಬಿನ ಬಿಲ್ ಗಳಿಗೆ ಶೇಕಡಾ 15% ರಷ್ಟು ಬಡ್ಡಿ ಹಣ ಸೇರಿಸಿ ಕೂಡಲೇ ರೈತರಿಗೆ ಹಣ ಸಂದಾಯ ಮಾಡಬೇಕು.

5) ಕಾರ್ಖಾನೆಯಲ್ಲಿ ಕಬ್ಬಿನ ಗಾಡಿ ಹೋದ ಕೂಡಲೆ ತೂಕ ಮಾಡಿ ರಶೀದಿ ನೀಡಬೇಕು.

6) ಪ್ರತಿ ಕಾರ್ಖಾನೆಯ ಆವರಣದಲ್ಲಿ ಸರಕಾರದಿಂದ ಎ.ಪಿ.ಎಮ್.ಸಿ.ಅಡಿಯಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ತತಕ್ಷಣ ಅಳವಡಿಸಬೇಕು.

7) ರೈತರ ಕಬ್ಬಿನ ತೂಕದಲ್ಲಿ ರವದಿಯ ತೂಕವನ್ನು ಕಬ್ಬಿನ ಮಾಲಿಕರ ತೂಕದಲ್ಲಿ ತಗೆಯಬಾರದು.

ಗೌರವಗಳೊಂದಿಗೆ,
ತಾಲೂಕಾ ಅಧ್ಯಕರು
ಹಾಗೂ ಹಸಿರು ಸೇನೆ , ಅಥಣಿ
ಚುನ್ನಪ್ಪ ಪೂಜಾರಿ ರಾಜ್ಯಾಧ್ಯಕ್ಷರು,
ಶಶಿಕಾಂತ ಪಡಸಲಗಿ
ರಾಜ್ಯ ಗೌರವಾಧ್ಯಕ್ಷರು
ಎಮ್.ಸಿ.ತಾಂಬೋಳಿ
ತಾಲೂಕಾ ಅಧ್ಯಕ್ಷರು
ತಾಲೂಕಾ ಉಪಾಧ್ಯಕ್ಷರು
ಜಂಬಗಿ ರಾಜ್ಯ ಸಂಚಾಲಕರು
ಪ್ರಕಾಶ ಪೂಜಾರಿ ಜಿಲ್ಲಾ ಗೌರವಾಧ್ಯಕ್ಷರು
ಬಾಬು ಜತ್ತಿ ಜಿಲ್ಲಾ ಸಂಚಾಲಕರು
ರಾವಸಾಬ ಜಗತಾಪ ಜಿಲ್ಲಾ ಮುಖಂಡರು
ಚನಗೌಡ ಇಮಗೌಡರ ತಾಲೂಕಾ ಕಾರ್ಯಾಧ್ಯಕ್ಷರು.
ಜಿಲ್ಲಾ ಮುಖಂಡರು
ಶಿವಾನಂದ ಹಾವರಡ್ಡಿ ತಾಲೂಕಾ ಮುಖಂಡರು
ದಶರಥ ನಾಯಕ್
ಸೋಮಲಿಂಗ ಗುಡ್ಡಾಪೂರ ತಾಲೂಕಾ ಸಂಸ್ಥೆ
ಮಹಾಂತೇಶ ಜಿವೋಜಿ ತಾಲೂಕಾ ಮುಖಂಡರು
ನಿಂಗಪ್ಪಾ ಮಂಟೂರ ತಾಲೂಕಾ ಮುಖಂಡರು

ಪ್ರತಿಗಳು : (ಮಾನ್ಯ ತಾಲೂಕಾ ದಂಡಾಧಿಕಾರಿಗಳ ಮೂಲಕ)

1) ಮಾನ್ಯ ಸಕ್ಕರೆ ಸಚಿವರು, ಕರ್ನಾಟಕ ಸರಕಾರ ಬೆಂಗಳೂರು.

2) ಮಾನ್ಯ ಕೃಷಿ ಸಚಿವರು, ಕರ್ನಾಟಕ ಸರಕಾರ ಬೆಂಗಳೂರು.

3) ಮಾನ್ಯ ಸಕ್ಕರೆ ಆಯುಕ್ತರು, (ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೆಶನಾಲಯ) ಕರ್ನಾಟಕ ಸರಕಾರ ಬೆಂಗಳೂರು.

4) ಮಾನ್ಯ ಸಕ್ಕರೆ ಆಯುಕ್ತರು ಬೆಳಗಾವಿ ಜಿಲ್ಲೆ.

0
684 views