logo

ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಅವಘಡ: ದೊಡ್ಡ ಅನಾಹುತ ತಪ್ಪಿಸಿದ ಸಾಗರ ಅಗ್ನಿಶಾಮಕದಳ ಸಿಬ್ಬಂದಿ....

ಸಾಗರ। ಅಡಿಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಸಂಭವಿಸಿದ್ದು ಸಾಗರ ಅಗ್ನಿಶಾಮಕ ದಳ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಇಲ್ಲಿನ ಗಾಂಧಿನಗರದ ಎರಡನೇ ಕ್ರಾಸ್ ನಲ್ಲಿ ಇರುವ ಮಂಡಕ್ಕಿ ಸಮದ್ ಸಾಬ್ ರವರ ಮನೆಯಲ್ಲಿ ಬುಧವಾರ ಸಂಜೆ ಏಳು ಮೂವತ್ತರ ಸುಮಾರಿಗೆ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಸೋರಿಕೆ ಯಾಗಿ ಬೆಂಕಿ ಸಂಭವಿಸಿದ್ದು ಮನೆ ಮಾಲಿಕಃ ತಕ್ಷಣ ಮನೆಯಲ್ಲಿ ಇದ್ದ ಹತ್ತು ಜನ ಕುಟುಂಬಸ್ಥರಿಗೆ ಮನೆಯ ಹೊರಗೆ ಕರೆದುಕೊಂಡು ಹೋಗಿ ತಕ್ಷಣ ಸಾಗರ ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ಕರೆ ಮಾಡಿದ್ದಾನೆ, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಒಂದು ದೊಡ್ಡ ಅನಾಹುತ ತಪ್ಪಿಸಿದ್ದಾರೆ ಅನ್ನಬಹುದು. ಮನೆ ಮಾಲೀಕ ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಾದ ಮಿಲ್ಫರ್ಡ್ ಜೆ , ಆನಂದ ವಡ್ಡರ್, ಶಿವಕುಮಾರ ಡಿ, ಸಂತೋಷ್ ಎಂಎಸ್, ಶ್ರೀನಿವಾಸ್ ದೇಸಳ್ಳಿ, ಹಾಜರಿದ್ದರು. ವರದಿ: ಜಮೀಲ್ ಸಾಗರ್ ಸುದ್ದಿ ಮನೆ

3
19931 views