
ಬಾರಂಗಿ ಹೋಬಳಿ ಜನರಿಂದ ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಜ್ಜು....
ಬಾರಂಗಿ ಹೋಬಳಿ ಜನರಿಂದ ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಜ್ಜು.... ಸಾಗರ: ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಕರೂರು ಬಾರಂಗಿ ಹೋಬಳಿಯ ಜನತೆ. ಶರಾವತಿ ಕಣಿವೆ ಅಭಯಾರಣ್ಯ ವಿರೋಧಿ ಹೋರಾಟ ಸಮಿತಿ ವತಿಯಿಂದ ಅರಣ್ಯ ಇಲಾಖೆಯ ರೈತ ವಿರೋಧಿ ನೀತಿಗಳ ವಿರುದ್ಧ ಬುದವಾರ ಹೋರಾಟದ ರೂಪುರೇಷೆ ಕುರಿತು ಖಂಡನಾ ಸಭೆ ನಡೆಯಿತು. ತಾಲ್ಲೂಕಿನ ಶರಾವತಿ ಹಿನ್ನೀರಿನ ಬಾರಂಗಿ ಹೋಬಳಿಯಲ್ಲಿ ರೈತರ ದೈನಂದಿನ ಕೃಷಿ ಚಟುವಟಿಕೆಗೆ ಅಡಚಣೆ ಹಾಗೂ ಅರಣ್ಯ ಇಲಾಖೆಯ ಜನ ವಿರೋಧಿ ನೀತಿ. ಅನಗತ್ಯ ಕಿರುಕುಳದ ವಿರುದ್ಧ ಕರೂರು ಬಾರಂಗಿ ಹೋಬಳಿಯ ಜನತೆ ರೋಸಿ ಹೋಗಿದ್ದು. ಅರಣ್ಯ ಇಲಾಖೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಬುಧವಾರ ಚನ್ನಗೊಂಡ ಗ್ರಾಮ ಪಂಚಾಯ್ತಿಯ ಕೋಗಾರು ವ್ಯಾಪ್ತಿಯಲ್ಲಿ ಸಭೆ ನಡೆಸಿದ ಗ್ರಾಮಸ್ಥರು ಕೃಷಿ ಚಟುವಟಿಕೆ. ರಸ್ತೆ. ವಿದ್ಯುತ್. ಹಲವು ಮೂಲಭೂತ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆಯ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಅಭಿವೃದ್ಧಿ ಕಾರ್ಯಗಳಿಗೆ ಪದೇ ಪದೇ ಆಕ್ಷೇಪ ಮಾಡುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಬಾರಂಗಿ ಹೋಬಳಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ನೆಡೆಸುತ್ತಿರುವ ಕೃಷಿ ಭೂಮಿ ಹಾಗೂ ನಿರ್ಮಿಸಿರುವ ಮನೆಗಳನ್ನು ತೆರವು ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಇಲಾಖೆ ದೌರ್ಜನ್ಯದಿಂದ ಈಗಾಗಲೇ ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದು. ಹಲವು ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬೆಳೆಗಳನ್ನು ನಾಶ ಮಾಡಿರುವ.. ಘಟನೆ ನಡೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಸಂಕಷ್ಟಕ್ಕೆ ಪರಿಹರಿಸುವಂತೆ ಕುರಿತು ಜಿಲ್ಲಾಡಳಿತಕ್ಕೆ. ತಹಶೀಲ್ದಾರರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಇದೇ ತಿಂಗಳ ದಿನಾಂಕಃ 23:08:2021 ರಂದು ಬೆಳಿಗ್ಗೆ 10:00 ಘಂಟೆಗೆ ಕಾರ್ಗಲ್ ವಲಯ ಅರಣ್ಯದಿಕಾರಿಯ ಕಛೇರಿಯ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದೇವೆ ಎಂದು ಶರಾವತಿ ಕಣಿವೆ ಅಭಯಾರಣ್ಯ ವಿರೋಧಿ ಹೋರಾಟ ಸಮಿತಿಯ ಸದಸ್ಯರು ತಿಳಿಸಿದರು. ಪ್ರತಿಭಟನಾ ಸಭೆಗೆ ಕರೂರು ಭಾರಂಗಿ ಹೋಬಳಿಯ ಎಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ರೈತ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಪಕ್ಷಾತೀತವಾಗಿ ಭಾಗವಹಿಸಿ ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಶರಾವತಿ ಕಣಿವೆ ಅಭಯಾರಣ್ಯ ವಿರೋಧಿ ಹೋರಾಟ ಸಮಿತಿಯ ಸದಸ್ಯರು. ಬಾರಂಗಿ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಗ್ರಾಮಸ್ಥರು ಭಾಗವಹಿಸಿದ್ದರು. ವರದಿ:ಸುಕುಮಾರ್ ಎಂ