logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 3 ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ.2026ನೇ ಸಾಲಿನ ಪ್ರಕರಣಗಳ ತನಿಖೆಯಲ್ಲಿ 4 ಆರೋಪಿಗಳ ಬಂಧನ

15 ತೊಲೆ ಬಂಗಾರ, 18 ತೊಲೆ ಬೆಳ್ಳಿ ಆಭರಣ ಜಪ್ತಿ – ಪತ್ತೆ ಕಾರ್ಯ ನಡೆಸಿದ ಪೊಲೀಸ್ ತಂಡಕ್ಕೆ ಎಸ್‌ಪಿ ಪ್ರಶಂಸೆ
ಕುಷ್ಟಗಿ, ಜೂನ್ 8: ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮೂರು ಸ್ವತ್ತಿನ (ಕಳ್ಳತನ) ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು ₹22 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
2026ನೇ ಸಾಲಿನಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೆ ಸಂಖ್ಯೆ 15/2026, 19/2026 ಹಾಗೂ 124/2026 ಪ್ರಕರಣಗಳ ತನಿಖೆಯನ್ನು ಕೈಗೊಂಡ ಪೊಲೀಸ್ ತಂಡವು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 15 ತೊಲೆ ಬಂಗಾರದ ಆಭರಣ ಹಾಗೂ 18 ತೊಲೆ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಮೊದಲ ಪ್ರಕರಣದಲ್ಲಿ ಇಲಕಲ್‌ನ ರಾಜಮೊಹಮ್ಮದ್ ಅಲಿಯಾಸ್ ರಾಜಾಅಹಮದ್ ಬೇಪಾರಿ ಎಂಬ ಆರೋಪಿಯಿಂದ ಬಂಗಾರದ ಎಂಗೇಜ್, ಸುತ್ತುಂಗುರ ಹಾಗೂ ಬೆಳ್ಳಿಯ ಬ್ರಾಸ್ ಲೈಟ್ ಮತ್ತು ಕಾಲು ಚೈನ್ ವಶಪಡಿಸಿಕೊಳ್ಳಲಾಗಿದೆ.
ಎರಡನೇ ಪ್ರಕರಣದಲ್ಲಿ ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್ಲ ಗ್ರಾಮದ ಬಸವರಾಜ ತರಲಕಟ್ಟಿ ಎಂಬಾತನಿಂದ ಬಂಗಾರದ ಕಿವಿಯೋಲೆ ಹಾಗೂ ಸುತ್ತುಂಗುರ ಜಪ್ತಿ ಮಾಡಲಾಗಿದೆ.
ಮೂರನೇ ಪ್ರಕರಣದಲ್ಲಿ ಕುಷ್ಟಗಿ ನಿವಾಸಿಗಳಾದ ನವೀನ್ ಕುಮಾರ ಕಲಾಲ್ ಮತ್ತು ಬಸವರಾಜ ಅಂಗಡಿ ಎಂಬ ಆರೋಪಿಗಳಿಂದ ವಿವಿಧ ರೀತಿಯ ಸುಮಾರು 13 ತೊಲೆ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್ ಎಲ್. ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ ಆರ್., ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡ, ಸಿಪಿಐ ವಿಶ್ವನಾಥ ಹಿರೇಗೌಡ ಹಾಗೂ ಪಿಎಸ್‌ಐ ಹನಮಂತಪ್ಪ ತಳವಾರ ನೇತೃತ್ವದಲ್ಲಿ ವಿಶೇಷ ಪತ್ತೆ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಒಟ್ಟು ಮೂರು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು ₹21 ಲಕ್ಷ ಮೌಲ್ಯದ 15 ತೊಲೆ ಬಂಗಾರದ ಆಭರಣ ಹಾಗೂ ₹1 ಲಕ್ಷ ಮೌಲ್ಯದ 18 ತೊಲೆ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು

5
100 views

Comment