logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಫಿಟ್ನೆಸ್ ಅವಧಿ ಮುಗಿದ ಖಾಸಗಿ ಶಾಲಾ ಬಸ್ಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಬೀದರ್: ಜಿಲ್ಲೆಯಲ್ಲಿ ಫಿಟ್‍ನೆಸ್ ಅವಧಿ ಮುಗಿದ ನಂತರವೂ ಸಂಚರಿಸುತ್ತಿರುವ ಖಾಸಗಿ ಶಾಲಾ, ಕಾಲೇಜು ಬಸ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.
ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಖಾಸಗಿ ಶಾಲೆ, ಕಾಲೇಜಿನವರು ಹಳೆಯ ವಾಹನಗಳನ್ನು ಖರೀದಿಸಿ, ಅದರಲ್ಲಿ ಮಕ್ಕಳನ್ನು ಶಾಲೆ, ಕಾಲೇಜಿಗೆ ಕರೆದೊಯ್ಯುವುದು, ಮರಳಿ ಮನೆಗೆ ಬಿಡುವುದು ಸಾಮಾನ್ಯವಾಗಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಗಮನ ಸೆಳೆದರು.
ಫಿಟ್‍ನೆಸ್ ಅವಧಿ ಮುಗಿದ ಅನೇಕ 'ಡಕೋಟಾ' ವಾಹನಗಳು ಮಕ್ಕಳನ್ನು ಹೊತ್ತುಕೊಂಡು ಹೋಗುತ್ತಿದ್ದರೂ ಸಾರಿಗೆ ಅಧಿಕಾರಿಗಳು ಜಾಣ ಕುರುಡ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾರಿಗೆ ಇಲಾಖೆ ಅಧಿಕಾರಿಗಳು ಶಾಲಾ, ಕಾಲೇಜು ಬಸ್‍ಗಳ ಫಿಟ್‍ನೆಸ್ ಪ್ರಮಾಣ ಪತ್ರ, ವಿಮೆ, ವಾಯು ಮಾಲಿನ್ಯ, ಚಾಲಕನ ಚಾಲನಾ ಪರವಾನಗಿ ತಪಾಸಣೆ ಮಾಡಿ ಕ್ರಮ ಕೈಗೊಂಡ ಯಾವುದೇ ನಿದರ್ಶನಗಳು ಇಲ್ಲ ಎಂದು ದೂರಿದರು.
ಖಾಸಗಿ ಶಾಲಾ, ಕಾಲೇಜು ವಾಹನ ದಾಖಲೆ, ಚಾಲಕರ ಚಾಲನಾ ಪರವಾನಗಿ ಪರಿಶೀಲಿಸಿ ಲೋಪ ಕಂಡು ಬಂದರೆ ಕ್ರಮ ಜರುಗಿಸಬೇಕು. ರಾಜ್ಯದ ತೆರಿಗೆ ಪಾವತಿಸದೆ, ಜಿಲ್ಲೆಯಲ್ಲಿ ಅವ್ಯಾಹತವಾಗಿ ಸಂಚರಿಸುತ್ತಿರುವ ನೆರೆ ರಾಜ್ಯಗಳ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಸುಧಾಕರ್ ರಾಠೋಡ್, ಸಂಘಟನಾ ಕಾರ್ಯದರ್ಶಿ ರವಿ ಪಾಟೀಲ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ರಾಜಗೀರಾ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಸವರಾಜ ಕಾರಬಾರಿ ಮತ್ತಿತರರು ಇದ್ದರು.

14
627 views

Comment