ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಗತಿ ನಿಧಿ ವಿತರಿಸಿದ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಖುಷಿ ಪತ್ತಿನ ಸಹಕಾರ ಸಂಘ
ಬೀದರ್: ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಖುಷಿ ಪತ್ತಿನ ಸಹಕಾರ ಸಂಘ ನಿಯಮಿತವನ್ನು ಶುಕ್ರವಾರ ಉದ್ಘಾಟಿಸಲಾಯಿತು.ಸಂಘವು ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಂಘದ ಅಧ್ಯಕ್ಷ ಸತೀಶಕುಮಾರ ಬಸಪ್ಪ ಬೀರನಹಳ್ಳಿ ತಿಳಿಸಿದರು.ಸ್ವಸಹಾಯ ಸಂಘಗಳಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ರೂ. 3 ಲಕ್ಷ ಪ್ರಗತಿ ನಿಧಿ ಕೊಡಲಿದೆ ಎಂದು ಹೇಳಿದರು.ಸಂಘದಿಂದ ರಚಿಸಲಾದ 25 ಮಹಿಳಾ ಸ್ವಸಹಾಯ ಸಂಘಗಳ ಪೈಕಿ 10 ಸಂಘಗಳಿಗೆ ಪ್ರಗತಿ ನಿಧಿ ವಿತರಿಸಲಾಯಿತು.ಸಂಘದ ಉಪಾಧ್ಯಕ್ಷ ರಮೇಶ ಗಣಪತಿ ನಾಗೂರೆ, ಕ್ಷೇತ್ರ ಅಧಿಕಾರಿಗಳಾದ ಸಚಿನ್ ರಾಜಕುಮಾರ ಬೀರನಹಳ್ಳಿ, ಮಂಜುನಾಥ ಹಾಲ್ಕೊಡೆ, ಭಾರತಿ ಮಹೇಶ ಕಾರ್ಜೋಳಗೆ ಮತ್ತಿತರರು ಇದ್ದರು.