ವಿಶ್ವ ಪರಿಸರ ದಿನಾಚರಣೆಯ ಆಚರಣೆ
ವಿಶ್ವ ಪರಿಸರ ದಿನಾಚರಣೆಯು ಜೂನ್ 5ರಂದು ಕಲಬುರಗಿಯ ಸರ್ವಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜಯವಾಣಿ ಕನ್ನಡ ದಿನಪತ್ರಿಕೆ ಆಶ್ರಯದಲ್ಲಿ ಜರುಗಿತ್ತು. ಮುಖ್ಯ ಅತಿಥಿಗಳಾಗಿ ಶರಣ ಬಸವ ವಿವಿ ಕಲಬುರಗಿಯ ಉಪಕುಲಪತಿಗಳಾದ ಡಾ. ಅನಿಲ್ ಕುಮಾರ್ ಬಿಡುವೆ ಆಗಮಿಸಿದರು. ಅನೇಕ ಶಾಲೆಯ ವಿದ್ಯಾರ್ಥಿಗಳು ಪರಿಸರ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದರು.ಡಾ. ಎಸ್ಎಂ ನೀಲಾ ಎಚ್ ಓ ಡಿ, ಎಸ್ ಬಿ ವಿವಿ ಕಲಬುರಗಿ ತೀರ್ಪುಗಾರರಾಗಿ ಆಗಮಿಸಿದರು.