logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕೆಎಚ್ಎಂ ಅವರಿಗೆ ಡಿಸಿಎಂ ಅಥವಾ ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದರ ಮಹಾ ಸಭಾ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರು ಮಾತನಾಡಿ ರಾಜ್ಯ ಮತ್ತು ಕೇಂದ್ರದಲ್ಲಿ ಹಿರಿಯ ರಾಜಕಾರಣಿ, ಹಿರಿಯ ಮುಖಂಡ, ಕೇಂದ್ರದಲ್ಲಿ ಮಂತ್ರಿಯಾಗಿದ್ದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಕೆ.ಎಚ್.ಮುನಿಯಪ್ಪ ಅವರಿಗೆ ಅರ್ಹತೆಗೆ ತಕ್ಕಂತೆ ಉಪಮುಖ್ಯಮಂತ್ರಿ ಸ್ಥಾನಮಾನವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಾದಾರ ಸಮುದಾಯದವರು ಒಟ್ಟಾಗಿ ಸೇರಿ ಕೆಎಚ್ ಮುನಿಯಪ್ಪ ಅವರಿಗೆ ನೀಡಿರುವ ಸಚಿವ ಸ್ಥಾನ ಎಷ್ಟರ ಮಟ್ಟಿಗೆ ಸರಿ, ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆಯನ್ನು ಹೊಂದಿರುವ ಇವರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಇದನ್ನು ಮಾದಾರ ಸಮುದಾಯ ಒಪ್ಪುವುದಿಲ್ಲ. ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ನಾಯಕರಿಗೆ ಸಚಿವ ಸ್ಥಾನ ಹಂಚಿಕೆಯಲ್ಲಿ ಅವಮಾನ ಮಾಡುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಅವರ ವಯಸ್ಸಿಗಾದರೂ ಬೆಲೆ ನೀಡಬೇಕಿತ್ತು. ಕಾಂಗ್ರೆಸ್ ಸರಕಾರದಲ್ಲಿ ಒಳಮೀಸಲಾತಿ ವಿಚಾರದಲ್ಲೂ ಹೆಚ್ಚು ಶ್ರಮವಹಿಸಿದ ನಮ್ಮ ಸಮುದಾಯದ ವರಿಷ್ಠ ಮುಖಂಡ ಕೆಎಚ್ ಮುನಿಯಪ್ಪ ಅವರು ಆಗಿದ್ದಾರೆ. ಇದು ತಪ್ಪು ಆದ್ದರಿಂದ ಕೂಡಲೇ ಸಚಿವ ಸಂಪುಟದಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಾದಾರ ಮಹಾ ಸಭಾ ಜಿಲ್ಲಾಧ್ಯಕ್ಷ ಸುಬ್ಬರಾಜು ಹಾಗೂ ರಾಜ್ಯ ಸಂಚಾಲಕ ಬಿ.ಕೆ.ಶಿವಪ್ಪ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡುವ ಮೂಲಕ ಒತ್ತಾಯಿಸಿದರು.

ಶ್ರೀ ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ಮುನಿರಾಜಪ್ಪ, ಮಾಜಿ ಅಧ್ಯಕ್ಷ ಜಾಲಿಗೆ ಮುನಿರಾಜು, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.

ಈ ವೇಳೆ ಮಾದಾರ ಸಮುದಾಯದ ಮುಖಂಡರಾದ ವಿಜಯಪುರ ವೇಣುಗೋಪಾಲ್, ಚನ್ನಹಳ್ಳಿ ನಾರಾಯಣಸ್ವಾಮಿ, ಮುದಗುರ್ಕಿ ನಾರಾಯಣಸ್ವಾಮಿ, ಕದಿರಪ್ಪ, ವೇಣುಗೋಪಾಲ್, ಹೆಚ್.ಡಿ.ದೇವರಾಜು, ಗೊಡ್ಲು ಮುದ್ದೇನಹಳ್ಳಿ ಮುನಿರಾಜು, ಮತ್ತಿತರರು ಇದ್ದರು.

ವರದಿ:ಹೈದರ್ ಸಾಬ್@ ದೇವನಹಳ್ಳಿ

1
0 views

Comment