ಸಿಲಿಂಡರ್ ಬುಕ್ಕಿಂಗ್ ಈಗ 45 ದಿನಕ್ಕೆ ?
ಆತಂಕ ಕೊಳಗಾದ ಗ್ರಾಹಕರು ಏಜೆನ್ಸಿಗಳು
ನಗರದಲ್ಲಿಗ ಗ್ರಹ ಬಳಕೆ ಸಿಲಿಂಡರ್ಗಳ ಬುಕಿಂಗ್ 45 ದಿನಗಳ ಏರಿಕೆ ಎಂಬ ಸುದ್ದಿ ಹರಡಿದ್ದು ಕೇಂದ್ರ ಸರ್ಕಾರ ಇದರ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಕೆಲವು ಏಜೆನ್ಸಿಗಳು ಆಗ್ರಹಿಸಿವೆ. ಕೆಲವು ಗ್ರಾಹಕರು ಏಜೆನ್ಸಿಗಳಿಗೆ ಸಂಪರ್ಕಿಸಿ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದು ಕೇಂದ್ರ ಸರ್ಕಾರದ ನೀತಿ ನಿಯಮಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಪ್ರತಿ ತಿಂಗಳು ಒಂದು ಸಿಲಿಂಡರ್ ನಂತೆ ಬುಕಿಂಗ್ ನಿಯಮ ತೊಂದರೆ ಇರಲಿಲ್ಲ ,ಈಗ ಬುಕಿಂಗ್ 45 ದಿನಕ್ಕೆಂದು ಕೇಳಿ ಬರುತ್ತಿರುವ ಸುದ್ದಿಗಳು ಏಜೆನ್ಸಿಗಳಿಗೆ ಗ್ರಾಹಕರಿಗೆ ತಲೆ ನೋವಾಗಿವೆ.