ಪಶ್ಚಿಮ ಬಂಗಾಳದ ರಾಷ್ಟ್ರೀಯ ಯುವ ಶಿಬಿರಕ್ಕೆ ದೇವನಹಳ್ಳಿಯ ಆಕಾಶ್ ಗ್ಲೋಬಲ್ ಕಾಲೇಜ್ ಆಫ್ ಮೆನೇಜ್ಮೆಂಟ್ ಅಂಡ್ ಸೈನ್ಸ್ ನಾ ಎಂಬಿಎ ವಿದ್ಯಾರ್ಥಿಗಳು ಆಯ್ಕೆ
ದೇವನಹಳ್ಳಿ : ಪಟ್ಟಣದ ಪ್ರಸನ್ನ ಹಳ್ಳಿ ಮುಖ್ಯರಸ್ತೆಯ ಆಕಾಶ್ ಗ್ಲೋಬಲ್ ಕಾಲೇಜ್ ಆಫ್ ಮೆನೇಜ್ಮೆಂಟ್ ಅಂಡ್ ಸೈನ್ಸ್ ನಾ ಪ್ರಥಮ ವರ್ಷದ ಎಂಬಿಎ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಐದು ಮಂದಿ ವಿದ್ಯಾರ್ಥಿಗಳು ಪಶ್ಚಿಮ ಬಂಗಾಳದ ಅಲಿಪುರ ಜಿಲ್ಲೆಯ ಮುನ್ಸಿಪಾರ ದಲ್ಲಿರುವ ರತನ್ ಬಿವಾಸ್ ಮೆಮೋರಿಯಲ್ ಶಾಲೆಯ ಆವರಣದಲ್ಲಿ ನವದೆಹಲಿಯ ರಾಷ್ಟ್ರೀಯ ಯುವ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಭಾವೈಕ್ಯತಾ ಯುವ ಶಾಂತಿ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ ಎಂದು ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ ತಿಳಿಸಿದರು.
ಈ ರಾಷ್ಟ್ರೀಯ ಯುವ ಶಿಬಿರದಲ್ಲಿ ಕರ್ನಾಟಕ ರಾಜ್ಯ ದಿಂದ ಐದು ಮಂದಿ ಯುವಕರು ಮಾತ್ರ ಆಯ್ಕೆಯಾಗಿದ್ದು ಡಿ.ಎಸ್. ಬೀರೇಶ್ ಇವರ ನಾಯಕತ್ವದಲ್ಲಿ ಜಿ. ಯೋಗೇಶ್, ಎಂ.ಬಿ. ಸಿದ್ದೇಶ್, ಟಿ. ಪ್ರವೀಣ್ ಹಾಗೂ ಜಿ. ಮಧು ಸೂದನ್ ಇವರುಗಳು ಭಾಗವಹಿಸಿದ್ದಾರೆ ಎಂದರು.
ಆರು ದಿನಗಳ ಕಾಲ ವಸತಿ ಸಹಿತ ನಡೆಯುವ ಈ ರಾಷ್ಟ್ರೀಯ ಯುವ ಶಿಬಿರದಲ್ಲಿ ದೇಶದ ಇಪ್ಪತ್ತು ನಾಲ್ಕು ರಾಜ್ಯಗಳಿಂದ ಇನ್ನೂರ ಅರವತ್ತು ಮಂದಿ ಯುವಕ,ಯುವತಿಯರು ಭಾಗವಹಿಸಲಿದ್ದು ಪ್ರತಿದಿನ ಇವರಿಗೆ ಯುವಗೀತೆ, ಧ್ವಜಾರೋಹಣ, ರಾಷ್ಟ್ರಗೀತೆ ಗಾಯನ, ಸರಳ ಯೋಗ, ಶ್ರಮದಾನ, ಭಾಷೆ ಹಾಗೂ ಸಾಂಸ್ಕೃತಿಕ ಯುವ ವಿನಿಮಯ ತರಬೇತಿಗಳು,ಜಾತ, ಪರಿಸರ ಸಂರಕ್ಷಣೆ, ಭಾರತ್ ಕಿ ಸಂತಾನ್ ನೃತ್ಯರೂಪಕ, ಗ್ರಾಮೀಣ ಕ್ರೀಡೆಗಳು ಸೇರಿದಂತೆ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ಥಳೀಯ ಪ್ರವಾಸದ ಅಂಗವಾಗಿ ಗೌಹಾಟಿ ಕಾಮಾಕ್ಯ ಮಂದಿರ, ಜಲ್ದಾಪುರ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ ರಾಜ್ಯದ ಚಹಾ ತೋಟ ಹಾಗೂ ಚಹಾ ಪುಡಿಗಳ ತಯಾರಿಸುವ ಘಟಕಗಳ ವೀಕ್ಷಣೆ ಮತ್ತು ಮಾರುಕಟ್ಟೆ ನಿರ್ವಹಣೆ ಎಂದಿಗೆ ಭೂತಾನ್ ದೇಶದ ವಿವಿಧ ಸ್ಥಳಗಳ ಭೇಟಿ ನೀಡಿ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.