logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕನ್ನಡ ಕಾದಂಬರಿ ಸಾರ್ವಭೌಮ ಡಾ. ಅ. ನ. ಕೃಷ್ಣರಾಯ

ಕನ್ನಡ ಕಾದಂಬರಿ ಸಾರ್ವಭೌಮ ಡಾ. ಅ. ನ. ಕೃಷ್ಣರಾಯರು

ಅರಕಲಗೂಡು ನರಸಿಂಗರಾಯ ಕೃಷ್ಣರಾಯ ರವರು 09-05-1904 ರಂದು ಕೋಲಾರ ಜಿಲ್ಲೆಯಲ್ಲಿ ಶ್ರೀಮತಿ ಅನ್ನಪೂರ್ಣಮ್ಮ ಮತ್ತು ಶ್ರೀ ನರಸಿಂಗರಾಯರ ಸುಪುತ್ರರಾಗಿ ಜನಿಸಿದರು.
ನರಸಿಂಗರಾಯರ ಮೂಲ ಊರು ಹಾಸನದ ಅರಕಲಗೂಡು.
ಕನ್ನಡ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು , ಕರ್ನಾಟಕ ಕನ್ನಡಪರ ಪ್ರಮುಖ ಹೋರಾಟಗಾರರು. ಮಹಾನ್ ಕನ್ನಡ ಅಭಿಮಾನಿಯಾಗಿದ್ದರು. ಇವರನ್ನು "ಕನ್ನಡ ಕಾದಂಬರಿ ಸಾರ್ವಭೌಮ" ಎಂದು ಕರೆಯುತ್ತಾರೆ.
ಅ. ನ.ಕೃ ರವರು ತಮ್ಮ ಭಾಷಣಗಳ ಮೂಲಕ ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು.
ಅ. ನ. ಕೃ ರವರು ಶಾಲಾ ದಿನಗಳಿಂದಲೂ ಸಾಹಿತ್ಯದ ಅಭಿರುಚಿ ಹೊಂದಿದ್ದರು. ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಉತ್ತರವಾಗಿ ಒಂದೇ ರಾತ್ರಿಯಲ್ಲಿ "ಮದುವೆಯೋ ಮನೆಹಾಳೋ" ಎಂಬ ನಾಟಕ ರಚಿಸುವ ಮೂಲಕ ಸಾಹಿತ್ಯ ರಚನೆ ಆರಂಭಿಸಿದರು.
ಬರವಣಿಗೆ ಇವರಿಗೆ ಜೀವನೋಪಾಯವಾಗಿತ್ತು.
ಅ. ನ. ಕೃ ರವರು ರಚಿಸಿರುವ ಸಾಹಿತ್ಯ 80,000 ಪುಟಗಳಿಗೂ ಅಧಿಕ.
ಕಾದಂಬರಿಗಳು -110
ನಾಟಕಗಳು -15
ಕಥಾ ಸಂಕಲನಗಳು -8
ಜೀವನ ಚರಿತ್ರೆಗಳು- 8
ಅನುವಾದ -3
ಸಂಪಾದಿತ ಕೃತಿಗಳು -12
ಇವರ ಮೊದಲ ಕಾದಂಬರಿ "ಜೀವನ ಯಾತ್ರೆ".
ನೂರನೆಯ ಕಾದಂಬರಿ "ಗರುಡ ಮಚ್ಚೆ "
ಪ್ರಶಸ್ತಿ ಪುರಸ್ಕಾರಗಳು :
ಸಾಹಿತ್ಯ ಕ್ಷೇತ್ರದ ಕೊಡುಗೆಯನ್ನು ಪರಿಗಣಿಸಿ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮಣಿಪಾಲದಲ್ಲಿ ನಡೆದ 43ನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
"ರಸಚೇತನ" ಎಂಬುದು ಅ. ನ. ಕೃ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ.
ಶಾ.ಮಂ. ಕೃಷ್ಣರಾಯ, ಜಿ.ಎಸ್. ಅಮೂರ, ಸೇವಾನಮಿ ರಾಜಾ ಮಲ್ಲ ಮುಂತಾದ ಸಾಹಿತಿಗಳು ಗ್ರಂಥ ರಚಿಸಿ ಗೌರವ ಸಲ್ಲಿಸಿದ್ದಾರೆ.
ಅ. ನ. ಕೃ "ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ" ಎಂದು ಹೆಸರಾಂತ
ಕಾದಂಬರಿಕಾರ ನಿರಂಜನ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜ 08-07-1971 ರಲ್ಲಿ ಇಹಲೋಕ ತ್ಯಜಿಸಿದರು.

25
955 views

Comment