ಬೀದರ ಜಿಲ್ಲಾ ಪೊಲೀಸ, ಸಂತಪೂರ ಪೊಲೀಸರಿಂದ ಮಟಕಾ ಜೂಜಾಟದ ಮೇಲೆ ದಾಳಿ
ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ ಮತ್ತು ಮರ್ಗದರ್ಶನದಂತೆ, ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಮಾಹಿತಿಯಂತೆ, ಶ್ರೀ ದಿನೇಶ ಎಮ್.ಟಿ, ಪಿ.ಎಸ್.ಐ ರವರು ತಮ್ಮ ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ದಾಳಿ ಮಾಡಿ ಅವರಿಂದ ಒಟ್ಟು 750=00 ರೂಪಾಯಿಗಳನ್ನು ವಶ ಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನಿನ ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಮಟಕಾ ಜೂಜಾಟ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ