logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಮಾಸ್ತಿ ಕನ್ನಡದ ಆಸ್ತಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಮಾಸ್ತಿ ಕನ್ನಡದ ಆಸ್ತಿ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ 06-06-1891 ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಯಲ್ಲಿ ಜನಿಸಿದರು.ಶ್ರೀಯುತರ ತಂದೆ ಶ್ರೀ. ರಾಮಸ್ವಾಮಿ ಅಯ್ಯಂಗಾರ್ ಮತ್ತು ತಾಯಿ ಶ್ರೀಮತಿ.ತಿರುಮಲಮ್ಮ ನವರು.
ಶ್ರೀಯುತ ಮಾಸ್ತಿಯವರು ಎಂ.ಎ ಪದವಿಯನ್ನು ವಾರನ್ನ ಮಾಡಿಕೊಂಡು ವಿದ್ಯಾಭ್ಯಾಸವನ್ನು ಪೂರೈಸಿದರು. ಸಣ್ಣ ಕಥೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಮದ್ರಾಸ್ ನಲ್ಲಿ ಆಂಗ್ಲ ಭಾಷೆಯಲ್ಲಿ ಎಂ. ಎ ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿಯವರು ಕಾಲೇಜಿನಲ್ಲಿ ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದರು.
ಬೆಂಗಳೂರಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಉಪಾಧ್ಯಾಯರಾಗಿದ್ದು, ನಂತರ ಸಿವಿಲ್ ಪರೀಕ್ಷೆಗೆ ಕುಳಿತು ತೇರ್ಗಡೆಯಾಗಿ ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಇವರಿಗೆ ಸಾಹಿತ್ಯ ರಚನೆ ಪ್ರವೃತ್ತಿಯಾಗಿ ಬೆಳೆಯಿತು. ಇವರು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿ 1943 ರಲ್ಲಿ ನಿವೃತ್ತರಾದರು.
1910 ರಲ್ಲಿ ಬರೆದ "ರಂಗನ ಮದುವೆ" ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ "ಮಾತುಗಾರ ರಾಮಣ್ಣ " ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ 123.
ಮಾಸ್ತಿಯವರು “ಶ್ರೀನಿವಾಸ” ಎಂಬ ಕಾವ್ಯನಾಮದಲ್ಲಿ ನೂರಾರು ಸಣ್ಣ ಕಥೆಗಳನ್ನು ಬರೆದರು.
1920 ರಲ್ಲಿ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು.ಮಾಸ್ತಿಯವರು ಸಣ್ಣ ಕಥೆ,ನೀಳ್ಗತೆ, ಕಾದಂಬರಿ,ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಮಾಸ್ತಿಯವರು "ಜೀವನ "ಎಂಬ ಪತ್ರಿಕೆಯ ಸಂಪಾದಕರಾಗಿದ್ದರು.
1983 ರಲ್ಲಿ ಚಿಕ್ಕವೀರರಾಜೇಂದ್ರ ಕಾದಂಬರಿಗಾಗಿ “ಜ್ಞಾನಪೀಠ ಪ್ರಶಸ್ತಿ” ಮುಡಿಗೇರಿಸಿಕೊಂಡರು.
ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಸ್ತಿಯವರಿಗೆ "ರಾಜಸೇವಾಸಕ್ತ" ಎಂಬ ಬಿರುದು ನೀಡಿ ಗೌರವಿಸಿದ್ದರು.
ಮಾಸ್ತಿಯವರ ಸಣ್ಣ ಕಥೆಗಳು ಇಂಗ್ಲಿಷ್, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
ದೂರದರ್ಶನದಲ್ಲಿ ಕೆಲವು ಕಥೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ.
ಮಹಾಕಾವ್ಯಗಳು : ಶ್ರೀರಾಮ ಭಟ್ಟಾಭಿಷೇಕ
ಸಣ್ಣ ಕಥೆಗಳು :5 ಸಂಪುಟ
ಶ್ರೀರಾಮ ಪಟ್ಟಾಭಿಷೇಕ (ಖಂಡ ಕಾವ್ಯ )
ಜೀವನ ಚರಿತ್ರೆಗಳು:
ರವೀಂದ್ರನಾಥ ಠಾಕೂರ್ , ಶ್ರೀ ರಾಮಕೃಷ್ಣ ಮುಂತಾದವು.
ಪ್ರಬಂಧಗಳು:
ಕನ್ನಡದ ಸೇವೆ, ವಿಮರ್ಶೆ 4 ಸಂಪುಟ , ಜನತೆಯ ಸಂಸ್ಕೃತಿ , ಜಾನಪದ ಸಾಹಿತ್ಯ, ಆರಂಭದ ಆಂಗ್ಲ ಸಾಹಿತ್ಯ ಮುಂತಾದವು.
ನಾಟಕಗಳು:
ಶಾಂತಾ, ಸಾವಿತ್ರಿ, ಉಷಾ, ಲಿಯರ್ ಮಹಾರಾಜ, ಪುರಂದರದಾಸ ಮುಂತಾದವು.
ಪ್ರಶಸ್ತಿಗಳು :
ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನದ ಅಧ್ಯಕ್ಷ ಪದವಿ -1946
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ- 1953
ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್- 1956
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -1968
ಮೈಸೂರು ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್- 1977
ಸಂದ ಗೌರವಗಳು :
ಮಾಸ್ತಿಯವರಿಗೆ ಸಂದ ಗೌರವ, ಪ್ರಶಸ್ತಿಗಳು, ಅಪಾರ "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ.
ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು.
ವರಕವಿ ದ.ರಾ ಬೇಂದ್ರೆ ಮಾಸ್ತಿಯವರನ್ನು "ಹಿರಿಯಣ್ಣ" ಎಂದು ಗೌರವಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದರು.
1927ರಲ್ಲಿ "ಶ್ರೀನಿವಾಸ" ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.
1993 ರಿಂದ ಅವರ ಹೆಸರಿನಲ್ಲಿ "ಮಾಸ್ತಿ ವೆಂಕಟೇಶ ಅಯ್ಯಂಗಾರ್" ಪ್ರಶಸ್ತಿಯನ್ನು ಕರ್ನಾಟಕ ಪ್ರಸಿದ್ಧ ಬರಹಗಾರರಿಗೆ ನೀಡಲಾಗುತ್ತಿದೆ.
ಮಾಸ್ತಿ ಗ್ರಾಮದಲ್ಲಿರುವ ಅವರ ಮನೆಯನ್ನು ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ.
ಮಾಸ್ತಿ ವೆಂಕಟೇಶ ಅಯ್ಯಂಗಾರರು 1986 ರಲ್ಲಿ ತಮ್ಮ 95ನೇ ಹುಟ್ಟು ಹಬ್ಬದಂದು ನಿಧನರಾದರು.

18
36 views

Comment