ಜೆಡಿಎಸ್ ಪಕ್ಷ ಪ್ರಾಬಲ್ಯಕ್ಕೆ ಒತ್ತು ಕೊಡಿ : ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ
ಜೆಡಿಎಸ್ ಪರಿಶಿಷ್ಟ ಜಾತಿ ನೂತನ ಪದಾಧಿಕಾರಿಗಳ ನೇಮಕ
DEVANAHALLI (JDS)
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಯಂಬ್ರಹಳ್ಳಿ ಸಮೀಪದಲ್ಲಿರುವ ಖಾಸಗಿ ರೆಸಾರ್ಟಿನಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ಪರಿಶಿಷ್ಟ ಜಾತಿ (ಎಸ್‌ಸಿ) ಘಟಕದ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷದ ಸಂಘಟನೆಯ ಹಿತದೃಷ್ಠಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ 101 ಜಾತಿಗಳ ಮುಖಂಡರೆಲ್ಲರೂ ಸೇರಿ ಪಕ್ಷದಿಂದ ಎಸ್‌ಸಿ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕಾರ ಮಾಡಬೇಕು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರಾಬಲ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಎಲ್ಲರೂ ಕೈಜೋಡಿಸಬೇಕು. ಪಕ್ಷದ ಕಾರ್ಯಕರ್ತರನ್ನು ಒಳಗೊಂಡ0ತೆ, ಮುಂದಿನ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜುಗೊಳ್ಳಬೇಕು. ಜೆಡಿಎಸ್ ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಕೆಲಸ ಮಾಡಿದಾಗ ಮಾತ್ರ ಪಕ್ಷ ಸಂಘಟನೆಗೊಳ್ಳುತ್ತದೆ. ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳು ಸಂಘಟನೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕ್ಷೇತ್ರದಲ್ಲಿ ಜೆಡಿಎಸ್ ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಲಹೆ ಮಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ತೂಬಗೆರೆ ಹೋಬಳಿಯ ಬಚ್ಚಹಳ್ಳಿ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕು ತಾಲೂಕಿನ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೊಳಿಸಬೇಕು. ಜನತಾ ದಳದ ಬಣ ನಮ್ಮದಾಗಿದ್ದು, ಜೆಡಿಎಸ್ ಪಕ್ಷವನ್ನು ಪೂಜಿಸುವ ಯಾರೇ ಬಂದರು ಸ್ವಾಗತಿಸುತ್ತೇವೆ. ವೈಯಕ್ತಿಕ ಕಾರಣಗಳಿಂದ ರಾಜಕೀಯ ನಡೆಸಿ ಇಲ್ಲಸಲ್ಲದ ಹೇಳಿಕೆಗಳನ್ನು ಕೆಲವರು ನೀಡುವುದು ಜೆಡಿಎಸ್ ಪಕ್ಷದ ಯಾವೊಬ್ಬ ಕಾರ್ಯಕರ್ತರೂ ಕಿವಿ ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಗುರ್ತಿಸಲಾಗುವುದು. ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರತಿಯೊಬ್ಬರನ್ನು ಮನವೊಲಿಸಿ ಜೆಡಿಎಸ್ ಪಕ್ಷವನ್ನು ಸರ್ವತೋಮುಖವಾಗಿ ಬೆಳೆಸಲಾಗುತ್ತದೆ ಎಂದು ಹೇಳಿದರು.
ನೂತನ ಪದಾಧಿಕಾರಿಗಳ ನೇಮಕ:
ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷರಾಗಿ ನಾಗರಾಜ್, ದೇವನಹಳ್ಳಿ ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ಸಿ.ರಾಮಣ್ಣ, ಕಾರ್ಯಧ್ಯಕ್ಷ ಶಿವಾನಂದ, ಪ್ರ.ಕಾರ್ಯದರ್ಶಿ ತಿರುಮಲೇಶ್.ಸಿ, ಕಾರ್ಯದರ್ಶಿ ಮೂರ್ತಿ.ಡಿ.ಟಿ, ಮತ್ತಿತರ ಪದಾಧಿಕರಿಗಳನ್ನು ನೇಮಕಗೊಳಿಸಿ ಆದೇಶಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್‌ಸಿ ಘಟಕದ ಮಾಜಿ ಅಧ್ಯಕ್ಷ ಗುರಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಮಹೇಶ್.ಎಸ್, ಪ್ರ.ಕಾರ್ಯದರ್ಶಿ ಗೋಣೂರು ಮನೋಹರ್, ಕಾರ್ಯಾಧ್ಯಕ್ಷ ಜಿ.ಎ.ರವೀಂದ್ರ, ಗೌರವ ಅಧ್ಯಕ್ಷ ಸಂಪಂಗಪ್ಪ, ಉಪಾಧ್ಯಕ್ಷ ಎಸ್.ನಾಗೇಶ್, ಕಾಳಪ್ಪನವರ ವೆಂಕಟೇಶ್, ಮುನಿರಾಜು, ಮಂಜುನಾಥ್, ಕಾರ್ಯದರ್ಶಿ ಯಲ್ಲಪ್ಪ, ರಾಮಾಂಜಿನೇಯದಾಸ್, ವಕ್ತಾರ ಗಂಗಾಧರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹೊಸಳ್ಳಿ ಟಿ.ರವಿ, ಮುಖಂಡರಾದ ವೆಂಕಟೇಶ್‌ಬಾಬು, ನಾರಾಯಣಸ್ವಾಮಿ, ಸುಬ್ಬಣ್ಣ, ತೂಬಗೆರೆ ಹೋಬಳಿ ಮುಖಂಡರು, ಕಾರ್ಯಕರ್ತರು ಇದ್ದರು.
ಚಿತ್ರ: ಜೆಡಿಎಸ್ ಪಕ್ಷದ ವತಿಯಿಂದ ಎಸ್‌ಸಿ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.