ಸಚಿವ ಈಶ್ವರ ಖಂಡ್ರೆ ಡಿಸಿಎಂ ಸ್ಥಾನದ ಆಕಾಂಕ್ಷಿ
ಭಾಲ್ಕಿ ಮತಕ್ಷೇತ್ರದ ಪ್ರಭಾವಿ ನಾಯಕ ಅರಣ್ಯಸಚಿವ ಈಶ್ವರ್ ಖಂಡ್ರೆ ಬೆಂಗಳೂರುನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ನಾನು ಅರಣ್ಯ ಇಲಾಖೆಯಲ್ಲಿ ಹತ್ತಾರು ಯೋಜನೆ ಕೊಟ್ಟಿದ್ದೇನೆ. ನನಗೆ ನನ್ನ ಕೆಲಸದ ಬಗ್ಗೆ ಸಾಕಷ್ಟು ತೃಪ್ತಿ ಇದೆ ನನಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ನನ್ನ ಕೆಲಸ ಹೈಕಮಾಂಡಿಗೂ ಗೊತ್ತಿದೆ ಸಂಪುಟದಲ್ಲಿ ಲಿಂಗಾಯತರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು ನಾನು ಡಿಸಿಎಂ ಸ್ಥಾನದ ಪ್ರಭಲ ಆಕಾಂಕ್ಷಿ ಎಂದು ಈಶ್ವರ್ ಖಂಡ್ರೆ ತಮ್ಮ ಇಂಗೀತವನ್ನು ವ್ಯಕ್ತಪಡಿಸಿದ್ದಾರೆ.