ಬಿಜೆಪಿ-ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಪೂರ್ವಭಾವಿ ಸಭೆ
ದೇವನಹಳ್ಳಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದೇವನಹಳ್ಳಿ ತಾಲ್ಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಸಭೆ ನಡೆಯಿತು.
ಬಿಜೆಪಿ ಜಿಲ್ಲಾ ಉಸ್ತುವಾರಿ ಬ್ಯಾಟ್ ರಂಗೇಗೌಡ ನೇತೃತ್ವದಲ್ಲಿ ಮತ್ತು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 10 ದಿನದ ಒಳಗಾಗಿ ಬೂತ್ ಮಟ್ಟದಲ್ಲಿ ಜಾರಿಯಾಗಲಿದೆ. ಇದರ ಕುರಿತು ಅಂತಿಮ ಹಂತದ ವಿವರಣೆಯನ್ನು BLA 2 ಮತ್ತು ಬೂತ್ ಅಧ್ಯಕ್ಷರಿಗೆ ತಿಳಿಸುವ ಉದ್ದೇಶದಿಂದ ಹಾಗೂ "ಬೂತ್ ಅಧ್ಯಕ್ಷರ ಕಾರ್ಯಗಾರದ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ದೇವನಹಳ್ಳಿ ತಾಲೂಕು ಅಧ್ಯಕ್ಷ ಎನ್ ಎಲ್ ಅಂಬರೀಶ್ ಗೌಡ ಮಾತನಾಡಿ, ವಿಜಯಪುರದಲ್ಲಿ ಜೂನ್ 7ರಂದು ಬಿ.ಎಲ್.ಎ. ಬೂತ್ ಮಟ್ಟದ ಸಭೆ ನಡೆಯಲಿದ್ದು, ಪ್ರತಿ ಮುಖಂಡರು, ಪದಾಧಿಕಾರಿಗಳು, ಮಹಿಳಾ ಮೊರ್ಚಾ, ಬೂತ್ ಅಧ್ಯಕ್ಷರು, ಬಿಎಲ್ಎ2 ಮತ್ತು ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡುವುದರ ಮೂಲಕ ಮಾತನಾಡಿದರು.
ಸಭೆಯಲ್ಲಿ ವಿಭಾಗ ಪ್ರಭಾರಿ ಬ್ಯಾಟರಂಗೇ ಗೌಡ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಹಿರಿಯರಾದ ಆರ್.ಎನ್.ಕೆ. ನಂಜೇಗೌಡ, ಬಿ.ಕೆ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ದೇ.ಸು.ನಾಗರಾಜ್, ಡೇರಿ ನಾಗೇಶ್, ರಾಜಪ್ಪ, ಯುವ ಬಿಜೆಪಿ ಅಧ್ಯಕ್ಷ ಪಿ.ಅನಿಲ್ ಕುಮಾರ್, ಸುಬ್ರಮಣಿ, ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ವರದಿ: ಹೈದರ್ ಸಾಬ್