logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜಾತಿ ಜನಗಣತಿ ಅಸ್ತ್ರ ಬಳಸಿ ಸಿಎಂ ರಾಜೀನಾಮೆಗೆ ಕಾಲಾವಕಾಶ ಕೇಳುವ ಸಾಧ್ಯತೆ ?

ಹಿಂದುಳಿದ ವರ್ಗಗಳ ಆಯೋಗದ ಜಾತಿಜನ ಗಣತಿ ವರದಿ ಅಧ್ಯಕ್ಷ ಮಧುಸೂದನ ರಿಂದ ಸರಕಾರ ತುರ್ತಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ಸಿಎಂ ಪಟ್ಟು ಹಿಡಿದು ಹೈಕಮಾಂಡ್ ದಿಂದ ರಾಜಿನಾಮೆಗೆ ಕಾಲಾವಕಾಶ ಕೇಳಿ ಡಿಕೆಶಿ ಬೀಸಿದ ಕತ್ತಿಗೆ ಗುರಾಣಿಯಾಗಿ ಜಾತಿ ಜನಗಣತಿ ಅಸ್ತ್ರವನ್ನಾಗಿ ಬಳಸಲಿದ್ದಾರೆಯಾ ? ಸಿಎಂ ಹಾಕಿದ ಪ್ಲಾನ್ ಗೆ ಹೈಕಮಾಂಡ್ ಒಪ್ಪಿದಲ್ಲಿ ಸಿಎಂಗೆ ಲಾಭವಾಗಲಿದೆ. ಒಂದು ವೇಳೆ ನಾವೆಲ್ಲ ನೋಡಿಕೊಳ್ಳುತ್ತೇವೆ ನೀವು ರಾಜೀನಾಮೆ ಕೊಡಿ ಎಂದಾಗ ಅನಿವಾರ್ಯ ಸಿಎಂ ರಾಜೀನಾಮೆ ಕೊಡಲೇಬೇಕು.

ಇಷ್ಟು ದಿನಗಳು ಬಿಟ್ಟು ತರಾತುರಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸ್ವೀಕರಿಸಿ ಪ್ರಕ್ರಿಯೆ ಮುಗಿಸಲು ಸಾಕಷ್ಟು ಕಾಲಾವಕಾಶ ಬೇಕು. ರಾಜ್ಯಪಾಲರ ಅಂಚಿತದ ಬಳಿಕ ಅನುಷ್ಠಾನದ ಪ್ರಕ್ರಿಯೆ ಆರಂಭವಾಗುತ್ತದೆ ಬಳಿಕ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಬೇಕಿದೆ. ಜಾತಿ ಜನಗಣತಿಯ ಬಗ್ಗೆ ಚರ್ಚೆ ಆಗಬೇಕು ನಂತರ ವಿಧಾನಸಭೆ ವಿಧಾನ ಪರಿಷತ್ತಿನಲ್ಲಿ ಮಂಡನೆ ಆಗಬೇಕು. ಗಣತಿ ವರದಿ ನೀಡಿ ಸಂಪುಟದ ಅನುಮತಿ ಪಡೆಯಬೇಕು.

ಇಷ್ಟೆಲ್ಲಾ ಪ್ರಕ್ರಿಯೆಗೆ ಕನಿಷ್ಠಪಕ್ಷ 3-4 ತಿಂಗಳು ಬೇಕು. ಒಂದು ವೇಳೆ ಇದೆಲ್ಲಾ ನಾವು ನೋಡಿಕೊಳ್ಳುತ್ತೇವೆ ಎಂದು ಹೈಕಮಾಂಡ್ ಹೇಳಿ ನೀವು ರಾಜೀನಾಮೆ ನೀಡಿ ಎಂದಾಗ ಮುಲಾಜಿ ಇಲ್ಲದೆ ಸಿದ್ದರಾಮಯ್ಯ ರಾಜನಾಮೆ ನೀಡಲೇಬೇಕಾದ ಪರಿಸ್ಥಿತಿ ಬರುತ್ತದೆ.

ಸಿಎಂ ಸಿದ್ದರಾಮಯ್ಯ ನವರ ಅಭಿಮಾನಿಗಳು ಹಾಗೂ ಅಹಿಂದ ಸಮಾಜದ ಮುಖಂಡರು ಹೈಕಮಾಂಡ್ ರಾಹುಲ್ ಗಾಂಧಿಗೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಡಿ ಎಂದು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾಯಿಸಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ್ ಸಮಾಜ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

4
877 views

Comment