ಸಚಿವ ಶರಣಪ್ರಕಾಶ್ ಕಾರ್ಯಕ್ರಮದಲ್ಲಿ ಭೀಕರ ಬಿರುಗಾಳಿ ಮಳೆಗೆ ನೆಲಕ್ಕುರುಳಿದ ವೇದಿಕೆ
ನಗರೋತ್ಥಾನ ಯೋಜನೆಯಡಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಸೇಡಂ ನಗರದ ಬಸ್ ನಿಲ್ದಾಣದ ಎದುರು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲರು ನೆರವೇರಿಸಿದರು. ಕಾರ್ಯಕ್ರಮ ಮುಗಿದ ಕೆಲವೇ ಕ್ಷಣಗಳಲ್ಲಿ ಭೀಕರ ಬಿರುಗಾಳಿ ಮಳೆಗೆ ತತ್ತರಿಸಿದ ವೇದಿಕೆ ನೆಲಕುರುಳಿತು. ಕುರ್ಚಿಗಳು ಗಾಳಿಯಲ್ಲಿ ಹಾರಿ, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಯಾರಿಗೂ ಪ್ರಾಣಪಯವಾಗಿಲ್ಲವೆಂದು ಬಲ್ಲ ಮೂಲಗಳಿಂದ ವರದಿಯಾಗಿದೆ.