logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕರ್ನಾಟಕದ ಸಿಂಹಾಸನಾಧೀಶ್ವರ ವ್ಯಾಸರಾಜರು

ಮೈಸೂರು: ಕರ್ನಾಟಕದ ಸಿಂಹಾಸನಾಧೀಶ್ವರ ವ್ಯಾಸರಾಜರು ಜಗದ್ಗುರು ಮಧ್ವಾಚಾರ್ಯರ ಶಿಷ್ಯರಾಗಿದ್ದು,ಕಾಲ ಕ್ರಿ.ಶ. 1447 ರಿಂದ 1548. ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಹುಟ್ಟಿದ್ದು, ತಮ್ಮ ಪೂರ್ವಾಶ್ರಮದ ಹೆಸರು ಯತಿರಾಜ. ತಾಯಿ ಶ್ರೀಮತಿ ಸೀತಾಬಾಯಿ ಮತ್ತು ತಂದೆ ಶ್ರೀ ರಾಮಾಚಾರ್ಯರು. ವ್ಯಾಸರಾಜರು ದ್ವೈತ ಪರಂಪರೆಯ ಪ್ರಮುಖ ಯತಿಗಳು ಮತ್ತು ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದರು.

ವಿಜಯನಗರ ಸಾಮ್ರಾಜ್ಯದ ಅರಸನಾದ ಕೃಷ್ಣದೇವರಾಯರು ಅವರಿಗೆ ರಾಜಗುರು ಸ್ಥಾನ ನೀಡಿದರು. ಅವರು ಕನ್ನಡ ನಾಡಿನ ಸಂಸ್ಕೃತಿಯನ್ನು ವಿಜಯನಗರ ಅರಸರ ಕಾಲದಲ್ಲಿ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅನೇಕ ಉಗಾ -ಭೋಗಗಳನ್ನು ರಚಿಸಿ, ಸಂಗೀತದ ಮೂಲಕ ಹರಿಭಕ್ತಿಯನ್ನು ಸಾರಿದರು. ಇವರು ಸಂಚಾರಿಸಿದ ಕಡೆಯಲ್ಲೆಲ್ಲಾ 732 ಮುಖ್ಯ ಪ್ರಾಣಮೂರ್ತಿಗಳನ್ನು ಪ್ರತಿಷ್ಠಾಪಿಸಿ, ದಶಲಕ್ಷಣಗಳಿಂದ ಕೂಡಿದ ವೈಶಿಷ್ಟ್ಯತೆಯುಳ್ಳ ಪ್ರತಿಮೆಗಳ ಮೂಲಕ ಭಕ್ತಿಯನ್ನು ಪ್ರಚುರಪಡಿಸಿದರು.
ಗಂಜಿಗುಂಟೆ, ಚಿದಂಬರಾಶ್ರಮ, ಬಳ್ಳಾರಿಯ ಹಂಪಿ , ಮೂರಾಂಡಹಳ್ಳಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಅವರ ಪ್ರತಿಷ್ಠಾಪಿತ ದೇವರುಗಳು ಇವೆ.
ಅವರ ಬೃಂದಾವನ ತುಂಗಭದ್ರಾ ನದಿಯ ದಡದಲ್ಲಿರುವ ಆನೆಗುಂದಿಯಲ್ಲಿದೆ .

0
8 views

Comment