logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಮಕೂರು: ಬಸವ ಜಯಂತಿ ಕಾರ್ಯಕ್ರಮ ಆಯೋಜನೆ

ತುಮಕೂರು ಜಿಲ್ಲೆಯ ಕೋರದಲ್ಲಿ 17.05.2026 ರಂದು ಶ್ರೀ ಬಸವೇಶ್ವರ ಪ್ರಚಾರ ಸಮಿತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ಬೆಂಗಳೂರಿನ ಕಮಲಾನಗರದ ಗಣ್ಯ ವ್ಯಕ್ತಿಗಳು ಮತ್ತು ನಾಗರೀಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಖ್ಯ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಬಸವೇಶ್ವರರ ಹಾಗೂ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. 119 ವಿದ್ಯಾರ್ಥಿಗಳಿಗೆ ಬಸವ ಕಾರುಣ್ಯ ವಿದ್ಯಾರ್ಥಿ ಕಿಟ್ ವಿತರಣೆ ಮಾಡಲಾಯಿತು. ಅಧ್ಯಕ್ಷರಾದ ಶ್ರೀಯುತ ಬಿ.ಎನ್. ಗಂಗರಾಜಯ್ಯನವರು, ಖಚಾಂಚಿ ಶ್ರೀಮತಿ ಮಹಾದೇವಮ್ಮನವರು, ಉಪಾಧ್ಯಕ್ಷರಾದ ಎನ್. ನರಸಿಂಹಮೂರ್ತಿ, ಕಾರ್ಯದರ್ಶಿಗಳಾದ ನರಸಿಂಹರಾಜು ಮತ್ತು ಸಂಚಾಲಕರಾದ ಪವನ್ ಕುಮಾರ್, ಹೇಮ ಮತ್ತು ಎಲ್ಲಾ ಸದಸ್ಯರು ಸೇರಿದಂತೆ ಕಾರ್ಯಕ್ರಮ ಯಶಸ್ವಿಯಾಗಿತು. ಕಾರ್ಯಕ್ರಮದ ಆಯೋಜಕತ್ವವನ್ನು ಬಸವೇಶ್ವರ ಪ್ರಚಾರ ಸಮಿತಿ, ಕಮಲಾನಗರ, ಬೆಂಗಳೂರಿನ ದೃವಕುಮಾರ್, ಬಸವೇಶ್ ಮತ್ತು ಸಹೋದರರು ವಹಿಸಿದ್ದರು.

2
55 views

Comment