logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಮಕೂರು: ಬಸವ ಜಯಂತಿ ಕಾರ್ಯಕ್ರಮ

ತುಮಕೂರು ಜಿಲ್ಲೆಯ ಕೋರದಲ್ಲಿ ಶ್ರೀ ಬಸವೇಶ್ವರ ಪ್ರಚಾರ ಸಮಿತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು 17.05.2026 ರಂದು ಏರ್ಪಡಿಸಲಾಗಿತ್ತು . ಇದರ ದಿವ್ಯ ಸಾನಿಧ್ಯವನ್ನು ಡಾ. ಸಿದ್ದಗಂಗಾ ಸ್ವಾಮೀಜಿ ಅವರ ವಹಿಸಿದ್ದರು.
ಬೆಂಗಳೂರಿನ ಕಮಲಾನಗರದ ಗಣ್ಯ ವ್ಯಕ್ತಿಗಳು, ನಾಗರಿಕರು ಪಾಲ್ಗೊಂಡಿದ್ದರು. ಮುಖ್ಯ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಬಸವೇಶ್ವರರ ಹಾಗೂ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಈ ಸುಸಂದರ್ಭದ ಸವಿನೆನಪಿಗಾಗಿ 119 ವಿದ್ಯಾರ್ಥಿಗಳಿಗೆ ಬಸವ ಕಾರುಣ್ಯ ವಿದ್ಯಾರ್ಥಿ ಕಿಟ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಯುತ. ಬಿ.ಎನ್. ಗಂಗರ ಗಂಗರಾಜಯ್ಯನವರು, ಖಚಾಂಚಿ ಶ್ರೀಮತಿ. ಮಹಾದೇವ ಮಹಾದೇವಮ್ಮನವರು, ಉಪಾಧ್ಯಕ್ಷರಾದ ಎನ್. ನರಸಿಂಹಮೂರ್ತಿ, ಕಾರ್ಯದರ್ಶಿಗಳಾದ ನರಸಿಂಹರಾಜು, ಸಂಚಾಲಕರಾದ ಪವನ್ ಕುಮಾರ್, ಹೇಮ, ಸರ್ವ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಎಲ್ಲಾ ಕಾರ್ಯಕ್ರಮದ ಆಯೋಜಕತ್ವವನ್ನು ಬಸವೇಶ್ವರ ಪ್ರಚಾರ ಸಮಿತಿ,ಕಮಲಾನಗರ, ಬೆಂಗಳೂರಿನ ದೃವಕುಮಾರ್,ಬಸವೇಶ್ ಮತ್ತು ಸಹೋದರರು ವಹಿಸಿದ್ದರು.

0
456 views

Comment