ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೆಂದು ಅಧಿಕಾರಿಯ ಪಿ ಎ ಚಂದ್ರನಾಥರ ಕೊಲೆಯ ಪ್ರಮುಖ ಶೂಟರ್ ಅರೆಸ್ಟ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೆಂದು ಅಧಿಕಾರಿಯ ಪಿ ಎ ಚಂದ್ರನಾಥರ ಕೊಲೆಯ ಪ್ರಮುಖ ಆರೋಪಿ ರಾಜಕುಮಾರ್ ನು ಹರಿದ್ವಾರದಿಂದ ದಿಲ್ಲಿಗೆ ಪಲಾಯನ ಆಗುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಈತನಿಗಿಂತ ಮುಂಚೆ 3 ಆರೋಪಿಗಳನ್ನು ಬಂಧಿಸಲಾಗಿತ್ತು. ಪೊಲೀಸರು ರಾಜಕುಮಾರ್ ನನ್ನು ಬಂಧಿಸಿ ಸಿಬಿಐ ವಶಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಸುವೆಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.