ಚಂದ್ರಶೇಖರಪುರದ ಇತಿಹಾಸ ಮತ್ತು ದೇವಾಲಯಗಳು
ಚಂದ್ರಶೇಖರಪುರದ ಇತಿಹಾಸ
ಚಂದ್ರಶೇಖರ ಪುರಕ್ಕೆ ಮೊದಲು ಚಿಟ್ನಳ್ಳಿ ಎಂದು ಹೆಸರಿತ್ತು. ಒಬ್ಬ ವೇಶ್ಯೆ ಒಂದು ದೊಡ್ಡ ಕೆರೆಯನ್ನು ಕಟ್ಟಿಸಿದ್ದು, ಈ ಕೆರೆಯ ನೀರಿನಿಂದ ಸುಮಾರು 2000 ಎಕರೆ ಗದ್ದೆ, 500 ಎಕರೆ ತೋಟಕ್ಕೆ ನೀರು ಸರಬರಾಜಾಗುತ್ತಿತ್ತು. ಈ ವೇಶ್ಯೆಯ ಹೆಸರು ಚಿಟ್ಟಿ. ಇದಕ್ಕಾಗಿ ಊರಿಗೆ ಚಿಟ್ನಳ್ಳಿ ಎಂದು ಹೆಸರಿತ್ತು.
ಒಮ್ಮೆ ಊರಿಗೆ ಶೃಂಗೇರಿ ಜಗದ್ಗುರುಗಳಾದ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಆಗಮಿಸಿ ನೆರೆದಿದ್ದ ಜನರಿಂದ ಪಾದಪೂಜೆಯನ್ನು ನೆರವೇರಿಸಿಕೊಂಡು, ತದನಂತರ ಚಂದ್ರಶೇಖರಪುರ ಎಂದು ಮರುನಾಮಕರಣ ಮಾಡಿದರು.
ಚಂದ್ರಶೇಖರ ಪುರದಲ್ಲಿ ಅತಿ ಪ್ರಾಚೀನ ದೇವಾಲಯಗಳಾದ ಹೊರಕೇರಮ್ಮ ದೇವಾಲಯ, ಗಣಪತಿ ದೇವಾಲಯ, ಅಭಯ ಆಂಜನೇಯ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಪಾಂಡುರಂಗ ದೇವಾಲಯ, ಶನಿಮಹಾತ್ಮ ದೇವಾಲಯ, ವೀರಭದ್ರ ಸ್ವಾಮಿ ದೇವಾಲಯ, ಕೋದಂಡರಾಮ ದೇವಾಲಯ, ಶ್ರೀರಾಮ ಮಂದಿರ, ಲಕ್ಷ್ಮಿಕಾಂತ ದೇವಾಲಯ, ಗುಡ್ಡ ಆಂಜನೇಯ ದೇವಾಲಯ, ಮಂದೇ ಮಾರಿ ದೇವಾಲಯ, ಮುರುಡ ಬಸವಣ್ಣ ದೇವಾಲಯದ ಸಂಗಮವಾಗಿದೆ. ಪ್ರತಿ ವರ್ಷ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಉತ್ಸವ, ಹೋಮಗಳು ಅನುಚಾನವಾಗಿ ನಡೆಯುತ್ತಾ ಬಂದಿದೆ.