ಚಂದ್ರಶೇಖರಪುರದ ಇತಿಹಾಸ
ಚಂದ್ರಶೇಖರಪುರ: ಚಂದ್ರಶೇಖರಪುರದ ಮೂಲ ಹೆಸರು ಚಿಟ್ನಳ್ಳಿ ಆಗಿತ್ತು. ಈ ಊರಿನಲ್ಲಿ ಚಿಟ್ಟಿ ಎಂಬ ವೇಶ್ಯೆಯೊಬ್ಬರು ಒಂದು ದೊಡ್ಡ ಕೆರೆಯನ್ನು ಕಟ್ಟಿದ್ದರು. ಈ ಕೆರೆಯಿಂದ ಸುಮಾರು 2000 ಎಕರೆ ಗದ್ದೆ ಹಾಗೂ 500 ಎಕರೆ ತೋಟಗಳಿಗೆ ನೀರು ಸರಬರಾಜಾಗುತ್ತಿತ್ತು. ಈ ಕಾರಣದಿಂದಾಗಿ ಊರಿಗೆ ಚಿಟ್ನಳ್ಳಿ ಎಂದು ಹೆಸರು ಬಂತು. ನಂತರ ಶೃಂಗೇರಿ ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಊರಿಗೆ ಭೇಟಿ ನೀಡಿ ಜನರಿಂದ ಪಾದಪೂಜೆಯನ್ನು ಸ್ವೀಕರಿಸಿ, ಊರಿನ ಹೆಸರನ್ನು ಚಂದ್ರಶೇಖರಪುರ ಎಂದು ನಾಮಕರಣ ಮಾಡಿದರು.
ಚಂದ್ರಶೇಖರಪುರದಲ್ಲಿ ಬಹುಮುಖ್ಯವಾದ ಪ್ರಾಚೀನ ದೇವಾಲಯಗಳಾದ ಹೊರಕೇರಮ್ಮ ದೇವಾಲಯ, ಗಣಪತಿ ದೇವಾಲಯ, ಅಭಯ ಆಂಜನೇಯ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಪಾಂಡುರಂಗ ದೇವಾಲಯ, ಶನಿಮಹಾತ್ಮ ದೇವಾಲಯ, ವೀರಭದ್ರಸ್ವಾಮಿ ದೇವಾಲಯ, ಕೋದಂಡರಾಮ ದೇವಾಲಯ, ಶ್ರೀರಾಮ ಮಂದಿರ, ಲಕ್ಷ್ಮಿಕಾಂತ ದೇವಾಲಯ, ಗುಡ್ಡ ಆಂಜನೇಯ ದೇವಾಲಯ, ಮಂದೇ ಮಾರಿ ದೇವಾಲಯ ಮತ್ತು ಮುರುಡ ಬಸವಣ್ಣ ದೇವಾಲಯಗಳು ಒಂದಾಗಿ ಇದ್ದವು. ಪ್ರತಿವರ್ಷ ಈ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮಗಳು ಮತ್ತು ಉತ್ಸವಗಳು ಆಚರಿಸಲಾಗುತ್ತಿವೆ.