ವಿಜಯಪುರ: ಸೀನಿಯರ್ ಚೆಂಬರ್ ಇಂಟರ್ ನ್ಯಾಷನಲ್ ಲೀಜನ್ ಪದವಿ ಸ್ವೀಕಾರ ಸಮಾರಂಭ
ವಿಜಯಪುರ: ಸೀನಿಯರ್ ಚೆಂಬರ್ ಇಂಟರ್ ನ್ಯಾಷನಲ್ (SCI) ವಿಜಯಪುರ ಲೀಜನ್‌ನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವು 16.05.2026 ರಂದು ವಿಜಯಪುರ ಟೌನ್‌ನ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು SCI ರಾಷ್ಟ್ರೀಯ ಅಧ್ಯಕ್ಷರಾದ ಎಂ. ವಾಸುದೇವನ್ ಉದ್ಘಾಟಿಸಿದರು. ಜೆ.ಆರ್. ಮುನಿವೀರಣ್ಣ ಅವರು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಂ.ಆರ್. ಜಯೇಶ್ ಅವರ ಪರಿಚಯ ಹಾಗೂ ಪಿನ್ ಸ್ವೀಕಾರವನ್ನು ಸುವರ್ಣಾವಕಾಶ ದೊರೆಯಿತು. ಅನಿಸ್ ಉರ್ ರೆಹಮಾನ್ ಅವರಿಂದ ನೆನಪಿನ ಕಾಣಿಕೆ ಸ್ವೀಕರಿಸಲಾಯಿತು.
ವಿಜಯಪುರ ಲೀಜನ್‌ನ ಮಾಜಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿ ಸಮಾರಂಭಕ್ಕೆ ಮೆರುಗು ತಂದರು. ಎಲ್ಲರ ಸಕ್ರಿಯ ಉಪಸ್ಥಿತಿಯಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನೆರವೇರಿತು. ಎಲ್ಲಾ ಗಣ್ಯರು, ಸದಸ್ಯರು ಹಾಗೂ ಆತಿಥೇಯರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಲಾಯಿತು.