logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತುಮಕೂರು: ಸತ್ಯನಾರಾಯಣರವರಿಗೆ ಜ್ಯೋತಿಷ್ಯ ರತ್ನ ಪ್ರಶಸ್ತಿ

ತುಮಕೂರು: ಗುಬ್ಬಿ ತಾಲೂಕಿನ ಚಂದ್ರಶೇಖರಪುರದ ಶ್ರೀಮತಿ ಸಾವಿತ್ರಮ್ಮ ಮತ್ತು ಶ್ರೀ ಪ್ರಭಾಕರ ಶಾಸ್ತ್ರಿಯವರ ಸುಪುತ್ರ ಸತ್ಯನಾರಾಯಣರವರು ಬಾಲ್ಯದಲ್ಲಿಯೇ ಸಿ.ನರಸಿಂಹಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದಾರೆ.
ಜೀವನೋಪಾಯಕ್ಕಾಗಿ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸಮಾಜ ಸೇವೆಯ ಉದ್ದೇಶದಿಂದ ಚಂದ್ರಶೇಖರಪುರದಲ್ಲಿ ಸಂಸ್ಕೃತ-ವೇದ ಪಾಠಶಾಲೆಯನ್ನು ಆರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಸಂಸ್ಕೃತ ಮತ್ತು ವೇದ ಪಾಠ ಕಲಿಸಲು ಕಾರಣೀಭೂತರಾಗಿದ್ದಾರೆ . ಗ್ರಾಮೀಣ ಪ್ರದೇಶದಲ್ಲಿ ಪೌರೋಹಿತ್ಯವನ್ನು ಮಾಡುತ್ತಾ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ.
ಇವರ ಸಾಧನೆಯನ್ನು ಪರಿಗಣಿಸಿ ಜಿ. ಆರ್. ಎಸ್ ಸಂಸ್ಕೃತ ಮತ್ತು ವೇದ ಪಾಠಶಾಲಾ ಸಂಸ್ಥೆಯಿಂದ ಜ್ಯೋತಿಷ್ಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿಯವರು ಮತ್ತು ಆದೋನಿ ಶಂಕರಾಚಾರ್ಯ ದತ್ತಾತ್ರೇಯ ಪೀಠದ ಪೀಠಾಧಿಪತಿಗಳಾದ ಡಾ. ವಿದ್ಯಾಭಿನವ ಸುಬ್ರಮಣ್ಯ ಭಾರತಿಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದ್ದಾರೆ.

24
1579 views

Comment