logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮದ್ಯದ ದರ ಏರಿಕೆ: ಸಾಮಾನ್ಯ ಬ್ರ್ಯಾಂಡ್ಗಳಿಗೆ ಶಾಕ್, ಪ್ರೀಮಿಯಂ ಬ್ರ್ಯಾಂಡ್ಗಳಿಗೆ ಸ್ವಲ್ಪ ರಿಲೀಫ್

ಮದ್ಯದ ದರ ಏರಿಕೆ: ಸಾಮಾನ್ಯ ಬ್ರ್ಯಾಂಡ್ಗಳಿಗೆ ಶಾಕ್, ಪ್ರೀಮಿಯಂ ಬ್ರ್ಯಾಂಡ್ಗಳಿಗೆ ಸ್ವಲ್ಪ ರಿಲೀಫ್!
ರಾಜ್ಯ ಸರ್ಕಾರ ಮದ್ಯದ ದರಗಳಲ್ಲಿ ಮತ್ತೊಮ್ಮೆ ಪರಿಷ್ಕರಣೆ ಮಾಡಿದ್ದು, ಸಾಮಾನ್ಯವಾಗಿ ಹೆಚ್ಚು ಮಾರಾಟವಾಗುವ ಹಾಗೂ ಮಧ್ಯಮ-ಕೆಳವರ್ಗದ ಜನರು ಬಳಸುವ ಬ್ರ್ಯಾಂಡ್ಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ವಿಶೇಷವೆಂದರೆ, ದುಬಾರಿ ಮತ್ತು ಪ್ರೀಮಿಯಂ ಬ್ರ್ಯಾಂಡ್ಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿರುವುದು ಮದ್ಯಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಸಾಮಾನ್ಯ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದ್ದು, ಸಾಮಾನ್ಯ ಜನರ ಮೇಲೆಯೇ ಏಕೆ ಬರೆ? ಎಂಬ ಪ್ರಶ್ನೆ ಕೇಳಲಾಗುತ್ತಿದೆ.
ಯಾವ ಬ್ರ್ಯಾಂಡ್ಗೆ ಎಷ್ಟು ಏರಿಕೆ? (180ml ದರ)
MC Brandy : 185 ರಿಂದ 215 (30 ಏರಿಕೆ)
DSP Black : 185 ರಿಂದ 215 (30 ಏರಿಕೆ)
8PM Whisky : 135 ರಿಂದ 165 (30 ಏರಿಕೆ)
Bagpiper : 135 ರಿಂದ 165 (30 ಏರಿಕೆ)
Old Tavern : 115 ರಿಂದ 145 (30 ಏರಿಕೆ)
Silver Cup : 95 ರಿಂದ 120 (25 ಏರಿಕೆ)
Original Choice : 95 ರಿಂದ 120 (25 ಏರಿಕೆ)
Old Monk : 155 ರಿಂದ 175 (20 ಏರಿಕೆ)
ಮದ್ಯದ ಹೊಸ ದರಪಟ್ಟಿ ಜಾರಿಗೆ ಬಂದಿದ್ದು, ಅಂಗಡಿಗಳಲ್ಲಿ ಪರಿಷ್ಕೃತ ಬೆಲೆ ಈಗಾಗಲೇ ಅನ್ವಯವಾಗಿದೆ. ಈ ದರ ಏರಿಕೆ ಸರ್ಕಾರದ ಆದಾಯ ಹೆಚ್ಚಿಸುವ ಕ್ರಮವೇ? ಅಥವಾ ಸಾಮಾನ್ಯ ಜನರ ಮೇಲಿನ ಹೆಚ್ಚುವರಿ ಹೊರೆವೇ? ಎಂಬ ಚರ್ಚೆ ಇದೀಗ ಜೋರಾಗಿದೆ.

16
5761 views

Comment