ಬೀದರ: ಜಾನಪದ ಕಲಾಮೇಳ ಕಾರ್ಯಕ್ರಮ
ಬೀದರ: ನಂದೀಶ್ವರ ನಾಟ್ಯ ಸಂಘ ಚಿಮಕೋಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಸಹಯೋಗದಲ್ಲಿ ಮೇ 13 ರಂದು ಬೆಳಿಗ್ಗೆ 10:30 ಗಂಟೆಗೆ ಬೀದರ ನಗರದ ಸವಿತಾ ಸಮುದಾಯ ಭವನದಲ್ಲಿ ಜಾನಪದ ಕಲಾಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಮಹೇಶ ಪಾಟೀಲ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿದ್ರಾಮ ಸಿಂಧೆ, ಶಂಭುಲಿಗ ವಾಲದೂಡ್ಡಿ, ಎಂ. ಎಸ್. ಮನೋಹರ, ವಿಜಯಕುಮಾರ ಸೋನಾರೆ, ಎಂ. ಜಿ. ದೇಶಪಾಂಡೆ, ಸಂಜೀವಕುಮಾರ ಅತಿವಾಳೆ ಹಾಗೂ ಲೋಕೇಶ ಮರ್ಜಾಪೂರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವದಾಸ ಚಿಮಕೋಡ ವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.