ಚನ್ನಪೇಟೆ: ಶಿವಸಮಾಸಾಲಿ ಸಮಾಜ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ಕಾರ್ಯಕ್ರಮ
ಕೇಸೂರು ಗ್ರಾಮದ ಶ್ರೀ ಶಿವಸಮಾಸಾಲಿ ಸಮಾಜ ಚನ್ನಪೇಟೆ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಮೇಡಂ, ಆದಪ್ಪ ಸಾಲವಾಡಗಿ ಸರ್ ಹಾಗೂ ಹನಮಂತರಾವ್ ದೇಸಾಯಿ ಮಾತನಾಡಿ, "ಒಂದು ಸಮಾಜ ಜೀವಂತವಾಗಿದೆ ಎನ್ನುವುದನ್ನು ಅದರ ಕಾರ್ಯಚಟುವಟಿಕೆಗಳು ತೋರಿಸುತ್ತವೆ. ಮದುವೆ, ಶಿಕ್ಷಣ, ಉದ್ಯೋಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾಜ ಒಗ್ಗಟ್ಟಿನಿಂದ ಮುಂದೆ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ," ಎಂದು ಹೇಳಿದರು. ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಈರನಗೌಡ ಟೆಂಗುಂಟಿ, ಮಹೇಬೂಬು ಸಾಬ್ ನೆಡುಲಮನಿ, ಕಲ್ಲಯ್ಯ ಅಜ್ಜ ಸರಗಣಾಚಾರಿ, ನಿಂಗಪ್ಪ ಸಜ್ಜನ ಹಾಗೂ ಉಮೇಶ್ ಮಡಿವಾಳ ಉಪಸ್ಥಿತರಿದ್ದರು.