ಪೊಲೀಸ್ ಪೇದೆಯೊಬ್ಬ ಸಚಿವರ
ಕಾಲಿಗೆ ಬಿದ್ದ ವಿಡಿಯೋ ವೈರಲ್
ಸೇಡಂ: ಇತ್ತೀಚೆಗೆ ಸಿಎಂ ಚಿನ್ನದ ಪದಕ ಪಡೆದಿದ್ದ ಸೇಡಂ ಸಿಪಿಐ ಕಚೇರಿ ಪೊಲೀಸ್ ಪೇದೆ ಮಾರುತಿ, ಹೆಚ್ಚುವರಿ ಎಸ್ಪಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಕಾಲಿಗೆ ಬಿದ್ದು ನಮಸ್ಕರಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು ಚರ್ಚೆಗೆಕಾರಣವಾಗಿದೆ.ಈ ಸನ್ನಿವೇಶ
ಸಾರ್ವಜನಿಕರ ಗಮನ ಸೆಳೆದಿದ್ದು, ವಿವಿಧ ಅಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟಿದೆ.