ಬೂಪಸಮುದ್ರಮ್ ಅಂಜನೇಯ ಸ್ವಾಮಿ ದೇವಸ್ಥಾನ ನವೀಕರಣ
ಬಂದರಲಹಳ್ಳಿ ನಗರಗೆರೆ ಹೋಬಳಿ ಅಂದ್ರ ಪ್ರದೇಶ ಸರಹದ್ದಿನಲ್ಲಿ ಇರುವ ಬೂಪಸಮುದ್ರಮ್ ಗ್ರಾಮದಲ್ಲಿ ಸುಮಾರು 400 ವರ್ಷಗಳ ಹಿಂದೆ ವ್ಯಸಾರಾಯರು ಸ್ಥಾಪಿಸಿದ ಅಭಯ ಹಸ್ತ ಆಂಜನೇಯ ಸ್ವಾಮಿ ದೇವಸ್ಥಾನವು ನವೀಕರಿಸಲ್ಪಟ್ಟಿದೆ.
ಈ ನವೀಕರಣದಿಂದ ಸ್ಥಳೀಯ ಜನರು ಹಾಗೂ ಭಕ್ತರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಬೂಪಸಮುದ್ರಮ್ ಗ್ರಾಮದಲ್ಲಿನ ಈ ಐತಿಹಾಸಿಕ ದೇವಸ್ಥಾನವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡಿದೆ.