ಬೆಳಗಾವಿಯಲ್ಲಿ ಬಿಸಿಲಿಗೆ ತಾತ್ಕಾಲಿಕ ನೆರಳು ವ್ಯವಸ್ಥೆ
ಬೆಳಗಾವಿ: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನಿಂದ ಬಳಲುತ್ತಿದ್ದ ನಗರ ಜನತೆಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ರಾಣಿ ಚೆನ್ನಮ್ಮ ವೃತ್ತ ಸಿಗ್ನಲ್ ಬಳಿ ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಬಿಸಿಲಿನಲ್ಲಿ ನಿಂತು ಕಾಯುವ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಇದು ದೊಡ್ಡ ಸಹಾಯವಾಗಿದೆ.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಾಪಮಾನ ಏರಿಕೆಯಿಂದಾಗಿ ಸಿಗ್ನಲ್ ಬಳಿ ನಿಲ್ಲುವುದು ಕಷ್ಟವಾಗಿದ್ದ ಪರಿಸ್ಥಿತಿಯಲ್ಲಿ, ಈ ನೆರಳು ವ್ಯವಸ್ಥೆ ಜನರಿಗೆ ಸಹಾಯಕವಾಗಿದೆ. ಸ್ಥಳೀಯರು ಇಂತಹ ವ್ಯವಸ್ಥೆಗಳನ್ನು ಇತರ ಟ್ರಾಫಿಕ್ ಜಂಕ್ಷನ್‌ಗಳಲ್ಲಿಯೂ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.