logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹಾಡೋನಹಳ್ಳಿ ಹಾಗೂ ತೂಬಗೆರೆ ಗ್ರಾಪಂ ವ್ಯಾಪ್ತಿಯ ಆಶ್ರಯ ನಿವೇಶನ ಜಮೀಗಳ ಪರಿಶೀಲನೆ ಜಿಪಂ ಸಿಇಒ

ಇಂದು ಡಾ. ವಾಸಂತಿ ಅಮರ್ ಬಿ ವಿ, ಭಾ.ಆ.ಸೇ , ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ರವರು ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಹಾಗೂ ತೂಬಗೆರೆ ಗ್ರಾ.ಪಂ.ಗಳ ವ್ಯಾಪ್ತಿಯ ಆಶ್ರಯ ನಿವೇಶನ ಜಮೀನನ್ನು ಪರಿಶೀಲನೆ ಮಾಡಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಸೇರಿದಂತೆ ತಾಲ್ಲೂಕಿನಲ್ಲಿ ಬಡವರಿಗೆ, ನಿವೇಶನ ರಹಿತರಿಗೆ ಸೈಟ್ ಹಂಚಿಕೆ ಮಾಡಬೇಕು. ಬಡವರಿಗೆ ನಿವೇಶನ, ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿ ಆಗಿದೆ. ನಿವೇಶನ ಹಕ್ಕುಪತ್ರ ವಿತರಣೆ ವಿಳಂಬ ಆಗಬಾರದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.

ವರದಿ: ಹೈದರ್ ಸಾಬ್

7
885 views

Comment