logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ನಗರದಲ್ಲಿ ಫುಟ್ಪಾತ್ ಎನ್ಕ್ರೋಚ್‌ಮೆಂಟ್ ವಿರುದ್ಧ ಬೃಹತ್ ಅಭಿಯಾನ – ಪ್ರತಿ ಮಂಗಳವಾರ ಕಠಿಣ ಕ್ರಮ

ಬೆಳಗಾವಿ ಸೌತ್‌ನಲ್ಲಿ ಫುಟ್ಪಾತ್ ಎನ್ಕ್ರೋಚ್‌ಮೆಂಟ್ ವಿರುದ್ಧ ಬೃಹತ್ ಅಭಿಯಾನ m– ಪ್ರತಿ ಮಂಗಳವಾರ ಕಠಿಣ ಕ್ರಮ
ಬೆಳಗಾವಿ ಸೌತ್ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯು ಫುಟ್ಪಾತ್ ಎನ್ಕ್ರೋಚ್‌ಮೆಂಟ್ ಹಾಗೂ ಬೀದಿ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಬೃಹತ್ ಅಭಿಯಾನ ಆರಂಭಿಸಿದೆ. ಸಾರ್ವಜನಿಕರು ನಡಿಗೆಯಲ್ಲಿ ಸಂಚರಿಸಲು ಮೀಸಲಾದ ಫುಟ್ಪಾತ್‌ಗಳನ್ನು ಅಕ್ರಮವಾಗಿ ಅತಿಕ್ರಮಿಸಿ, ದಾರಿಯಲ್ಲಿ ಅಡ್ಡವಾಗಿ ಕುಳಿತು ವ್ಯಾಪಾರ ನಡೆಸುತ್ತಿರುವುದರಿಂದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಪಾಲಿಕೆಯ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದರೂ ಹಾಗೂ ಪರ್ಯಾಯ ಸ್ಥಳಗಳನ್ನು ಅಲಾಟ್ ಮಾಡಿದರೂ ಕೆಲವು ವ್ಯಾಪಾರಿಗಳು ಮತ್ತೆ ಅದೇ ಸ್ಥಳಕ್ಕೆ ಬಂದು ಅಕ್ರಮವಾಗಿ ಕುಳಿತು ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಇದರಿಂದ ಫುಟ್ಪಾತ್‌ಗಳನ್ನು ಸಂಪೂರ್ಣ ತೆರವುಗೊಳಿಸಲು ಹಾಗೂ ಅನಧಿಕೃತ ಕಟ್ಟಡಗಳನ್ನು ಡೆಮೊಲಿಷ್ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದುಮಹಾನಗರ ಪಾಲಿಕೆ ಕಮಿಷನರ್ ಸರ್, ಮತ್ತು ನಿಪ್ಪಾಣಿಕರ ಸಿಟಿ ಎಂಜಿನಿಯರ್ ಮ್ಯಾಡಮ್ ಆದೇಶ ಹೊರಡಿಸಿದ್ದಾರೆ.
ಈ ಅಭಿಯಾನವನ್ನು ಪ್ರತಿ ಮಂಗಳವಾರ ನಿಯಮಿತವಾಗಿ ನಡೆಸಲಾಗುವುದು. ವಿಶೇಷವಾಗಿ ಬೆಳಗಾoವಿ ನಗರ ಸೇರಿದಂತೆ ಬೆಳಗಾoವಿ ಸೌತ್‌ನ ಪ್ರಮುಖ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ಅಕ್ರಮವಾಗಿ ಫುಟ್ಪಾತ್ ಅತಿಕ್ರಮಣೆ ಮಾಡಿದರೆ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ತೆರವುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ನಡಿಗೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಮನವಿ ಮಾಡಿದೆ.

14
7701 views

Comment