logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಥಣಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರವೇಶ ಪ್ರಾರಂಭ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಥಣಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಪ್ರಸ್ತುತ ಸಿವಿಎಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸಗಳು ಲಭ್ಯ ಇದ್ದು, ಎಸ್.ಎಸ್.ಎಲ್.ಸಿ./ಸಿ.ಬಿ.ಎಸ್.ಇ./ಐ.ಸಿ.ಎಸ್.ಇ. ಪಾಸಾದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಐಟಿಐ ಅಥವಾ ಪಿಯುಸಿ (ಸೈನ್ಸ್) ಪೂರೈಸಿದ ಅಭ್ಯರ್ಥಿಗಳಿಗೆ ದ್ವಿತೀಯ ವರ್ಷದ ಪ್ರವೇಶದ ಅವಕಾಶವು ಇದೆ.



ಸೌಲಭ್ಯಗಳು: ನಮ್ಮ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉತ್ತಮ ಪ್ರಯೋಗಾಲಗಳು, ನುರಿತ ಮತ್ತು ಅನುಭವಿ ಬೋಧಕ ವೃಂದ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಎನ್.ಎಸ್.ಎಸ್, ರೆಡ್ ಕ್ರಾಸ್ ಘಟಕಗಳು ಇಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.



ದಾಖಲೆಗಳು: ಎಸ್.ಎಸ್.ಎಲ್.ಸಿ. ಅಂಕಪಟ್ಟಿ ವರ್ಗಾವಣೆ ಪ್ರಮಾಣ ಪತ್ರ (ಎಲ್.ಸಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ), ವ್ಯಾಸಂಗ ಪ್ರಮಾಣ ಪತ್ರ(1ರಿಂದ10), ಆಧಾರ ಕಾರ್ಡ್ ಹಾಗೂ ಪಾಸ್‌ ಪೋರ್ಟ್ ಸೈಜಿನ ಫೋಟೋಗಳನ್ನು ಸಲ್ಲಿಸಬೇಕು.



ಶುಲ್ಕ ಮತ್ತು ವಿದ್ಯಾರ್ಥಿ ವೇತನ: ಸರಕಾರದ ನಿಯಮಾನುಸಾರ ಕಡಿಮೆ ಶುಲ್ಕ ವಿಧಿಸಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನ ಸೌಲಭ್ಯಗಳೂ ಲಭ್ಯವಿವೆ. ಮೊದಲು ಬಂದವರಿಗೆ ಮೆರಿಟ್ ಆಧಾರದ ಮೇಲೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಾಂಶುಪಾಲರಾದ ಪ್ರೊ. ಶಿವಕುಮಾರ ಪೂಜಾರಿ ಸೂಚಿಸಿದ್ದಾರೆ.



ಹೆಚ್ಚಿನ ಮಾಹಿತಿಗಾಗಿ : 8951585155, 9538813825, 8105425206, 9480537144 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿರಿ.

18
861 views

Comment