logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾoವಿಯಲ್ಲಿ 43 ವರ್ಷದ ನಂತರ ಮಹಾಲಕ್ಷ್ಮೀ ದೇವಿಯ ಜಾತ್ರೆ ಏಪ್ರಿಲ್ 28ರಿಂದಮೇ6ರವರೆಗೆವಿಶೇಷಕಾರ್ಯಕ್ರಮ,Belagavi: ಜಿಲ್ಲೆಯ ಬಿ.ಕೆ.ಕಂಗ್ರಾಳಿ ಗ್ರಾಮದ ಮಹಾಲಕ್ಷ್ಮೀ ದೇವಿಯಜಾತ್ರೆ

ಬೆಳಗಾoವಿಯಲ್ಲಿ 43 ವರ್ಷದ ನಂತರ ಮಹಾಲಕ್ಷ್ಮೀ ದೇವಿಯ ಜಾತ್ರೆ – ಏಪ್ರಿಲ್ 28 ರಿಂದ ಮೇ 6ರವರೆಗೆ ವಿಶೇಷ ಕಾರ್ಯಕ್ರಮ

Belagavi: ಜಿಲ್ಲೆಯ ಬಿ.ಕೆ. ಕಂಗ್ರಾಳಿ ಗ್ರಾಮದ ಮಹಾಲಕ್ಷ್ಮೀ ದೇವಿಯ ಜಾತ್ರೆ ನಲ್ವತ್ತ್ಮೂರು ವರ್ಷದ ನಂತರ ಭಕ್ತಿಭಾವ ಮತ್ತು ಸಂಭ್ರಮದೊಂದಿಗೆ ನಡೆಯಲಿದೆ. ಏಪ್ರಿಲ್ 28, 2026 ರಿಂದ ಮೇ 6, 2026ರವರೆಗೆ ನಡೆಯುವ ಈ ವಿಶೇಷ ಜಾತ್ರೆಗೆ ಭಕ್ತರಲ್ಲಿ ಈಗಾಗಲೇ ಭಾರಿ ಉತ್ಸಾಹ ಕಂಡುಬಂದಿದೆ.

ಈ ಸಂಬಂಧವಾಗಿ ಸಚಿವರು ಲಕ್ಷ್ಮಿ,ಹೆಬ್ಬಾಳ್ಕರ್ರ ಮಾತನಾಡಿ, “ಇದು ನನ್ನ ಕ್ಷೇತ್ರದ ಜನರ ಮಹತ್ವದ ಧಾರ್ಮಿಕ ಕಾರ್ಯಕ್ರಮ. ನಾನು ಈ ಕ್ಷೇತ್ರದ ಮಗಳೆಂದು ತಿಳಿದುಕೊಂಡು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುತ್ತೇನೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೀರು, ಸಾರಿಗೆ, ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಜಾತ್ರೆಯನ್ನು ಭವ್ಯವಾಗಿ ಮತ್ತು ಸಂಭ್ರಮದಿಂದ ನಡೆಸಲಾಗುತ್ತದೆ,” ಎಂದು ತಿಳಿಸಿದ್ದಾರೆ.

43 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಲಕ್ಷ್ಮೀ ಜಾತ್ರೆಯಲ್ಲಿ ವಿಶೇಷ ಪೂಜೆಗಳು, ಧಾರ್ಮಿಕ ಕಾರ್ಯಕ್ರಮಗಳು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಆಯೋಜನೆಗಳನ್ನು ಮಾಡಲಾಗಿದೆ. ಸುತ್ತಮುತ್ತಲಿನ ಗ್ರಾಮಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ಈ ಜಾತ್ರೆಯನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ದೀರ್ಘ ವಿರಾಮದ ನಂತರ ನಡೆಯುತ್ತಿರುವ ಈ ಮಹಾಲಕ್ಷ್ಮೀ ದೇವಿಯ ಜಾತ್ರೆ ಪ್ರದೇಶದ ಜನರಲ್ಲಿ ಭಕ್ತಿಭಾವ ಮತ್ತು ಸಂಭ್ರಮ ಹೆಚ್ಚಿಸಿದೆ.



ದಿನಾಂಕ್ :೨೭/೪/೨೬

ಜಿಲ್ಲಾ :ಬೆಳಗಾಂವಿ

ರಿಪೋರ್ಟ್ :ರಾಘವೇಂದ್ರ. ಕೆ

32
7051 views

Comment