logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ವಿಜಯಲಕ್ಷ್ಮಿ ಹೆಚ್.ಎಂ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆಗಳ ಸುರಿಮಳೆ

ವಿಜಯಲಕ್ಷ್ಮಿ ಹೆಚ್.ಎಂ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆಗಳ ಸುರಿಮಳೆ

ಹರಿಹರ ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಹೆಚ್.ಎಂ ಅವರು ತಮ್ಮ ಶ್ರಮ ಹಾಗೂ ಸಂಕಲ್ಪದಿಂದ ಅತ್ಯುತ್ತಮ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

10/10/2010ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಕೆ. ಬೇವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ಪ್ರಸ್ತುತ ಬನ್ನಿಕೋಡನ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದರು.

ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇಕಡಾ 90 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ತಮ್ಮ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಗುರುಗಳ ಮಾರ್ಗದರ್ಶನದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.

ಅವರ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಕುಟುಂಬದವರ ಅಮೂಲ್ಯ ಸಹಕಾರ ಕಾರಣವಾಗಿದೆ. ಅವರ ಈ ಯಶಸ್ಸಿಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.

ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ತಂದೆ ಮಹೇಶ್ವರಪ್ಪ ಹೆಚ್.ಜಿ.ತಾಯಿ ಕೆ.ಎನ್. ಗಂಗಮ್ಮ ಹಾಗೂ ಕುಟುಂಬದವರಾದ ಶಿಕ್ಷಕರಾದ ಶ್ರೀಮತಿ ಗೀತಮ್ಮ ಚಂದ್ರಪ್ಪ. ಬಿ. ಆರ್,
ಶ್ರೀಮತಿ ಸವಿತಾ ರಾಜಪ್ಪ ಹೆಚ್.ಕೆ., ಶ್ರೀಮತಿ ರೂಪಾ ವಿಶ್ವನಾಥ್ ಹೆಚ್.ಆರ್., ಶ್ರೀಮತಿ ಗೌರಮ್ಮ ಚಿಕ್ಕಪ್ಪ, ಯಲ್ಲಾಪುರ , ಶ್ರೀಮತಿ ನಾಗಮ್ಮ ರುದ್ರೇಶ್ ಕೆ.ಎನ್. ತಂಗಿಯಾದ ಎಚ್. ಎಂ. ವಿನುತಾ ಇವರು ಇವಳ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲು ಹಾರೈಸಿದ್ದಾರೆ.

ಮುಂದೆ ಶಿಕ್ಷಕಿ ಆಗುವ ಕನಸನ್ನು ಹೊಂದಿರುವ ವಿಜಯಲಕ್ಷ್ಮಿ, ತಮ್ಮ ಗುರಿ ಸಾಧಿಸಲು ನಿರಂತರ ಪರಿಶ್ರಮ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

143
3255 views

Comment