logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ: ಬೇಸಿಗೆ ತಾಪಕ್ಕೆ ತತ್ತರಿಸಿದ ಹಿರಿಯ ಮಂಗ – ರಕ್ಷಣೆಗಾಗಿ ಜನರ ಮನವಿ

ಬೆಳಗಾವಿ: ಬೇಸಿಗೆ ತಾಪಕ್ಕೆ ತತ್ತರಿಸಿದ ಹಿರಿಯ ಮಂಗ – ರಕ್ಷಣೆಗಾಗಿ ಜನರ ಮನವಿ
ಬೆಳಗಾವಿ ನಗರದ ಚನ್ನಮ್ಮ ಸರ್ಕಲ್ ಹತ್ತಿರ ಕಳೆದ ಎರಡು ದಿನಗಳಿಂದ ಒಬ್ಬ ಹಿರಿಯ ಮಂಗ ಅತಿಯಾದ ಬೇಸಿಗೆಗೆ ತತ್ತರಿಸಿ ಅಳುತ್ತಾ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ. ಸ್ಥಳೀಯರ ಪ್ರಕಾರ ಮಂಗಕ್ಕೆ ಸರಿಯಾಗಿ ನೀರು ಹಾಗೂ ಆಹಾರ ಸಿಗದೆ, ದೇಹಶಕ್ತಿ ಕುಂದುತ್ತಿದ್ದು ನೆಲದ ಮೇಲೆ ಪರಡುತ್ತಾ ಇರುವ ಸ್ಥಿತಿ ಕಂಡುಬಂದಿದೆ.
ಪ್ರದೇಶದ ಜನರು ಮಾನವೀಯತೆ ಮೆರೆದಿದ್ದು, ಕೆಲವರು ನೀರು ಮತ್ತು ಆಹಾರ ನೀಡಲು ಪ್ರಯತ್ನಿಸಿದರೂ ಮಂಗದ ಆರೋಗ್ಯ ಸ್ಥಿತಿ ಸರಿ ಇಲ್ಲ ತಕ್ಷಣ ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಮೃಗಾಲಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಮಂಗವನ್ನು ರಕ್ಷಿಸಿ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಾಣಿಗಳ ರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಮನವಿ.

14
5767 views

Comment