ಚಿಕ್ಕೋಡಿಯಲ್ಲಿ ಕರ್ನಾಟಕ ರಾಜ್ಯ ಪ.ಜಾತಿ, ಪ.ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ) ಅವರು ಆಯೋಜಿಸಿದ್ದ ಮಹಿಳಾ ಸಬಲೀಕರಣದ ಕಾರ್ಯಕ್ರಮ.
22 - 04 - 2026 ರಂದು ಚಿಕ್ಕೋಡಿಯಲ್ಲಿ ಕರ್ನಾಟಕ ರಾಜ್ಯ ಪ.ಜಾತಿ, ಪ.ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ) ಅವರು ಆಯೋಜಿಸಿದ್ದ ಮಹಿಳಾ ಸಬಲೀಕರಣದ ಕಾರ್ಯಕ್ರಮದಲ್ಲಿ ನಮ್ಮ ಮೋಳೆ ಗ್ರಾಮದ ಸಾಮಾಜಿಕ ಹೋರಾಟಗಾರರೂ ನನ್ನ ಆತ್ಮೀಯ ಗೆಳೆಯರೂ ಆಗಿರುವ ಶ್ರೀ ಮಹೇಶ ಸಿದರಾಯ ಭಜಂತ್ರಿ ಇವರಿಗೆ ಸನ್ಮಾನಿಸಿದ ಕ್ಷಣ. ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ ಭೀಮಪುತ್ರಿ ನಾಗಮ್ಮ, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಅಂಜನಾ ಭಜಂತ್ರಿ ಹಾಗೂ ಸಂಘಟನೆಯ ಎಲ್ಲ ಪದಾಧಿಕಾರಿಗಳು ಹಾಗೂ ನೂರಾರು ಜನ ಉಪಸ್ಥಿತರಿದ್ದರು.