logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಹಾಯೋಗಿ ಬಸವಣ್ಣನಿಗೆ ನಮನ ಬೆಳಗಾವಿ, ಏಪ್ರಿಲ್ 2೦ 2026: ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು

ಮಹಾಯೋಗಿ ಬಸವಣ್ಣನಿಗೆ ನಮನ
ಬೆಳಗಾವಿ, ಏಪ್ರಿಲ್ 2೦ 2026: ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು. ಸಮಾಜದಲ್ಲಿ ಸಮಾನತೆ, ಸತ್ಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಮಹಾಯೋಗಿ ಬಸವಣ್ಣನವರ ಜಯಂತಿಯನ್ನು ರಾಜ್ಯದಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.

“ಎಲ್ಲ ಕ್ರಾಂತಿಗಳು ಕತ್ತಿಯಿಂದ ಆರಂಭವಾಗುವುದಿಲ್ಲ; ಕೆಲವು ವಚನ ಮತ್ತು ಆಲೋಚನೆಗಳಿಂದ ಆರಂಭವಾಗುತ್ತವೆ” ಎಂಬ ಸಂದೇಶದಂತೆ ಬಸವಣ್ಣನವರು ವರ್ಗ–ಜಾತಿ ಗೋಡೆಗಳನ್ನು ಒಡೆಯಲು ಪದಗಳನ್ನೇ ಶಸ್ತ್ರವಾಗಿ ಬಳಸಿದರು.

ಸಮಾನತೆಯ ಬೀಜ ಬಿತ್ತಿದ ಆ ಮಹಾನ್ ಆತ್ಮಕ್ಕೆ ಜನತೆ ನಮನ ಸಲ್ಲಿಸುತ್ತಿದ್ದಾರೆ. ಬಸವಣ್ಣನವರ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ನೈತಿಕತೆ ಮತ್ತು ಅಂತರಂಗ ಶುದ್ಧಿಯ ಮಹತ್ವವನ್ನು ಸಾರುತ್ತವೆ.
ಬಸವಣ್ಣನವರ ಪ್ರಸಿದ್ಧ ವಚನವು ಮಾನವ ಜೀವನದ ಮೌಲ್ಯಗಳನ್ನು ನೆನಪಿಸುತ್ತದೆ:
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ನರಿಗೆ ಅಸಯ ಪಡಬೇಡ,
ತನ್ನ ಬನ್ನಿಸ ಬೇಡ, ಇದೀರ ಹಳಿಯಲು ಬೇಡ;
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ!
ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ.”
ಈ ಬಸವ ಜಯಂತಿಯಂದು ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ, ಸೌಹಾರ್ದತೆ ಮತ್ತು ಮಾನವೀಯತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಕೈಗೊಳ್ಳಬೇಕೆಂದು ವಿವಿಧ ವಲಯಗಳಿಂದ ಕರೆ ಕೇಳಿಬಂದಿದೆ.

16
9408 views

Comment