logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗದಗ ರಾತ್ರಿ ವೇಳೆ ಸೊಳ್ಳೆ ಪದರೆ ಕಟ್ಟಿಕೊಂಡು ಸೊಳ್ಳೆ ಬತ್ತಿ ಹಚ್ಚಿತಿರುವವರೇ ಹುಷಾರ್

ಬೇಸಿಗೆಯ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಮಲಗುವವರ ಸಂಖ್ಯೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಸೊಳ್ಳೆ ಬತ್ತಿ ಬಳಕೆಯಿಂದ ಸಂಭವಿಸಿದ ದಾರುಣ ಘಟನೆ ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ ಶೆಡ್‌ ಮುಂದೆ ನಿಲ್ಲಿಸಲಾಗಿದ್ದ ಕ್ರೂಸರ್ ವಾಹನದಲ್ಲಿ ಮಲಗಿದ್ದ ಬಾಲಕನಿಗೆ ಸೊಳ್ಳೆ ಬತ್ತಿಯಿಂದ ಉಂಟಾದ ಬೆಂಕಿ ಅನಾಹುತವಾಗಿ ಜೀವ ತೆತ್ತಿದೆ. ಮೃತಪಟ್ಟ ಬಾಲಕನನ್ನು ಸದಾನಂದ ಉಪ್ಪಾರ (14) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಸದಾನಂದನು ಕ್ರೂಸರ್ ವಾಹನದ ಒಳಭಾಗದಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ್ದನು. ವಾಹನದ ಕಿಟಕಿಗಳ ಗಾಜುಗಳನ್ನೂ ಮುಚ್ಚಲಾಗಿತ್ತು. ಅದೇ ವೇಳೆ, ಅವನ ಅಣ್ಣ ಮೈಲಾರಿ ಉಪ್ಪಾರ ವಾಹನದ ಮೇಲ್ಬಾಗದಲ್ಲಿ ಮಲಗಿದ್ದನು.

ರಾತ್ರಿ ವೇಳೆ ಸೊಳ್ಳೆ ಬತ್ತಿಯಿಂದ ಹೊತ್ತಿದ ಕಿಡಿ ನಿಧಾನವಾಗಿ ವಾಹನದೊಳಗೆ ಬೆಂಕಿ ಹತ್ತಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ವಾಹನವನ್ನು ಆವರಿಸಿದೆ. ಬೆಂಕಿಯ ತಾಪದಿಂದ ವಾಹನದ ಮೇಲ್ಬಾಗದಲ್ಲಿ ಮಲಗಿದ್ದ ಮೈಲಾರಿಯ ತಲೆ ಕೂದಲಿಗೂ ಬೆಂಕಿ ತಗುಲಿದ್ದು, ಆತ ಎಚ್ಚರಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

0
0 views

Comment