logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಹಿಳೆ ಮತ್ತು ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ಮಹಿಳೆ ಮತ್ತು ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ದಾವಣಗೆರೆ, ದಿನಾಂಕ 14.04.2026 ರಂದು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತರ್ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ವಕೀಲರಾದ ನಂದಿನಿ ಡಿ. ಪಾಟೀಲ್ ಅವರು “ಮಹಿಳೆ ಮತ್ತು ಕಾನೂನು” ವಿಷಯವಾಗಿ ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು. ತಮ್ಮ ಭಾಷಣದಲ್ಲಿ ಮಹಿಳೆಯರಿಗೆ ಲಭ್ಯವಿರುವ ವಿವಿಧ ಕಾನೂನು ಹಕ್ಕುಗಳು ಮತ್ತು ರಕ್ಷಣಾತ್ಮಕ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಜೀರೋ ಎಫ್‌ಐಆರ್ (Zero FIR), ಸಮಾನ ವೇತನ, ಪಾರಂಪರಿಕ ಆಸ್ತಿ ಹಕ್ಕು, ಉಚಿತ ಆಂಬ್ಯುಲೆನ್ಸ್ ಸೇವೆ, ಕೆಲಸದ ಸ್ಥಳದ ಹಕ್ಕುಗಳು ಮತ್ತು ರಕ್ಷಣೆ, ಕಿರುಕುಳದಿಂದ ರಕ್ಷಣೆ, ಮಾತೃತ್ವ ರಜೆ, ಸಮಾನ ಕೆಲಸಕ್ಕೆ ಸಮಾನ ವೇತನ, ಬಂಧನ ಮತ್ತು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳು, ಗೃಹ ಹಿಂಸಾಚಾರ ಮತ್ತು ವರದಕ್ಷಣೆ ವಿರುದ್ಧ ರಕ್ಷಣೆ, ಆರೋಗ್ಯ ಸೇವೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳು ಹಾಗೂ ಉಚಿತ ಕಾನೂನು ಸಹಾಯ – ಎಲ್ಲರಿಗೂ ನ್ಯಾಯ ಎಂಬ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ, ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾನ್ಯ ಆಡಳಿತ ಕುಲ ಸಚಿವರಾದ ಶ್ರೀ ಎಸ್. ಬಿ. ಗಂಟಿ ಅವರು ಮಾತನಾಡಿ, ಮಹಿಳೆಯರು ವೇದಗಳ ಕಾಲದಿಂದಲೂ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಇಂದಿನ ದಿನಗಳಲ್ಲಿ ಮಹಿಳೆಯರು ಕಾನೂನಿನ ಸದ್ಬಳಕೆಯನ್ನು ಮಾಡಿಕೊಂಡು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ. ಹೆಚ್. ಆರ್. ತಿಪ್ಪೇಸ್ವಾಮಿ,ಡಾ. ಮಧುಮಾಲತಿ. ಪಿ. ಅಣ್ಣೀಶ್, ಮಂಜುನಾಥ್, ಜಿ.ಡಾ. ರಾಘವೇಂದ್ರ, ಹಾಗೂ ವಿಶ್ವನಾಥ ಡಿ. ಆರ್. ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಕೊನೆಯಲ್ಲಿ ಉತ್ತರವನ್ನು ಪಡೆದರು.

23
989 views

Comment