ಗದಗ
ಮುಂಡರಗಿ ಪಟ್ಟಣದ ಎಸ್ ಎಸ್ ಪಾಟೀಲ್
ನಗರದಲ್ಲಿ ಜಯಂತಿ ಜ್ಞಾನದ ಸೂರ್ಯ,
ಸಮಾನತೆಯ ಶಿಲ್ಪಿ -ಬಾಬಾಸಾಹೇಬ್
ಅಂಬೇಡ್ಕರ್ ಜಯಂತಿಯನ್ನ ಅರ್ಥ ಪೂರ್ಣ ಆಚರಣೆ
ಅಂಬೇಡ್ಕರವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಮಹಾನ್ ಶಕ್ತಿ. ನೂರು ತಲೆಮಾರುಗಳ ಸಂಕೋಲೆಯನ್ನು ಮೆಟ್ಟಿ ನಿಂತು, ಅಕ್ಷರವನ್ನೇ ಆಯುಧವನ್ನಾಗಿಸಿಕೊಂಡು, ಭಾರತದ ಕೋಟ್ಯಂತರ ಜನರಿಗೆ ಗೌರವದ ಬದುಕು ಕಲ್ಪಿಸಿಕೊಟ್ಟ ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಕೋಟಿ ಕೋಟಿ ನಮನಗಳು.
ಕೇವಲ ಹಕ್ಕುಗಳನ್ನು ಮಾತ್ರವಲ್ಲ, ಕರ್ತವ್ಯವನ್ನೂ ನೆನಪಿಸಿದ ನಮ್ಮ ಸಂವಿಧಾನದ ಶಿಲ್ಪಿಗೆ ಗೌರವ ಸಲ್ಲಿಸೋಣ. ಬನ್ನಿ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.
'ಕಲಿಯಿರಿ, ಸಂಘಟಿತರಾಗಿ, ಹೋರಾಡಿ'
"ಸೂರ್ಯ ಮೂಡದೆ ಕತ್ತಲು ಸರಿಯದು, ಬಾಬಾಸಾಹೇಬರು ಹುಟ್ಟದಿದ್ದರೆ ಬಾರದ ಪ್ರಜೆಗಳು ಬದುಕು ಬೆಳಗುತ್ತಿರಲಿಲ್ಲ."
ಭಾರತೀಯ ಸಂವಿಧಾನದ ಜನಕ, ಜ್ಞಾನದ ಸಂಕೇತ,
ಬೋಧಿಸತ್ವನ ಬೆಳಕು ನಮ್ಮೆಲ್ಲರ ಬದುಕಿನ ಹಾದಿಯನ್ನು ಬೆಳಗಲಿ.
"ಸಿಂಹದಂತೆ ಗರ್ಜಿಸಿ, ಬುದ್ಧನಂತೆ ಶಾಂತಿಯನ್ನು ಹರಡಿ."
ಬಾಬಾಸಾಹೇಬರು ನಮಗೆ ನೀಡಿದ್ದು ಕೇವಲ ಸಂವಿಧಾನವಲ್ಲ, ಅದು ತಲೆ ಎತ್ತಿ ಬದುಕುವ ಹಾದಿ.
ಓದು ಬದುಕನ್ನು ಬದಲಿಸುತ್ತದೆ ಎಂದು ತೋರಿಸಿಕೊಟ್ಟ ಶ್ರೇಷ್ಠ ವಿದ್ಯಾವಂತನಿಗೆ ನಮ್ಮ ಗೌರವ.
ಇಂದು ಅವರ ಜನ್ಮದಿನದ ಸಂಭ್ರಮ. ಬನ್ನಿ, ಸಮಾನತೆಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ.
ವಿಶ್ವ ಮಾನವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು! ಕಾರ್ಯಕ್ರಮದಲ್ಲಿ ನಗರದ ಅನೇಕ ಹಿರಿಯರು ತಾಯಂದಿರು ಮುದ್ದು ಮಕ್ಕಳು ಪಾಲ್ಗೊಂಡಿದ್ದರು.