ಘಟಪ್ರಭಾದ ಸರಸ್ವತಿ ಶಿಕ್ಷಣ ಸಂಸ್ಥೆಯಲ್ಲಿ ಸೈನಿಕ ಶಾಲೆಯ 4, 5ನೇ ತರಗತಿ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದಿದ್ದ
ಘಟಪ್ರಭಾದ ಸರಸ್ವತಿ ಶಿಕ್ಷಣ ಸಂಸ್ಥೆಯಲ್ಲಿ ಸೈನಿಕ ಶಾಲೆಯ 4, 5ನೇ ತರಗತಿ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದಿದ್ದ ಪಾರ್ಥಕುಮಾರ ತಿವಾರಿ, ಯುಪಿಎಸ್‌ಸಿ-ಎನ್‌ಡಿಎ ಪರೀಕ್ಷೆಯಲ್ಲಿ ಎಐಆರ್ ಮೊದಲ ಶ್ರೇಯಾಂಕ ಪಡೆದಿದ್ದಾರೆ. ತಮ್ಮಲ್ಲಿ ತರಬೇತಿ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗೆ ಸಂಸ್ಥೆ ಅಧ್ಯಕ್ಷ ಶಂಕರ ಕುರಣಗಿ ಮತ್ತು ಸದಸ್ಯರು ಅಭಿನಂದಿಸಿದ್ದಾರೆ.