logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಂತರ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರ ಉದ್ಘಾಟನೆ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಂತರ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರ ಉದ್ಘಾಟನೆ



ದಾವಣಗೆರೆ, ಏಪ್ರಿಲ್ 10:

ದಾವಣಗೆರೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ (NSS) ವಿಭಾಗದ ವತಿಯಿಂದ 2025-26ನೇ ಸಾಲಿನ ಅಂತರ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಶುಕ್ರವಾರ ಸಂಜೆ 5 ಗಂಟೆಗೆ ವಿಶ್ವವಿದ್ಯಾನಿಲಯದಲ್ಲಿ ಗೌರವಭರಿತವಾಗಿ ನೆರವೇರಿತು.



ಕಾರ್ಯಕ್ರಮಕ್ಕೆ ಪ್ರಾರ್ಥನೆಯ ಮೂಲಕ ಚಾಲನೆ ನೀಡಲಾಯಿತು. ಎಸ್.ಜಿ.ಆರ್.ಕೆ.ಎಸ್ ಮಹಿಳಾ ಮಹಾವಿದ್ಯಾಲಯ, ಹರಿಹರದ ಕಾರ್ಯಕ್ರಮ ಅಧಿಕಾರಿಯಾದ ಡಾ. ಪವಿತ್ರ ಎಸ್.ಟಿ ಅವರು ಪ್ರಾರ್ಥನೆ ನೆರವೇರಿಸಿದರು. ನಂತರ ಡಾ. ಅಶೋಕ್ ಕುಮಾರ್ ವಿ. ಪಾಳೇದ ಅವರು ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಗಳ ಮೂಲಕ ಶಿಬಿರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.



ಶಿಬಿರವನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣ ಹಾಗೂ ನಾಯಕತ್ವ ಗುಣಗಳ ವೃದ್ಧಿಗೆ ಇಂತಹ ಶಿಬಿರಗಳು ಪ್ರಮುಖ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಯುವತಿಯರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.



ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಆಡಳಿತ ಕುಲಸಚಿವರಾದ ಶ್ರೀ ಎಸ್.ಬಿ. ಗಂಟೆ (ಕೆ.ಎ.ಎಸ್), ಪರೀಕ್ಷಾಂಗ ಕುಲಸಚಿವರಾದ ಡಾ. ರಮೇಶ್ ಸಿ.ಕೆ., ಹಾಗೂ ಹಣಕಾಸು ಅಧಿಕಾರಿಯಾದ ಡಾ. ಶಶಿಧರ ಆರ್. ಅವರು ಉಪಸ್ಥಿತರಾಗಿ ಶಿಬಿರಾರ್ಥಿಗಳಿಗೆ ಶುಭಾಶಯ ಕೋರಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಬಿ.ಡಿ. ಕುಂಬಾರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಹಿಳಾ ನಾಯಕತ್ವದ ಅಗತ್ಯತೆ ಮತ್ತು ಯುವಜನರಲ್ಲಿ ಸೇವಾ ಮನೋಭಾವ ಬೆಳೆಸುವ ಮಹತ್ವವನ್ನು ಒತ್ತಿಹೇಳಿದರು.



ಚಿತ್ರದುರ್ಗದ ಮಹಾರಾಜಾ ಮದಕರಿ ನಾಯಕ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಡಾ. ಗಂಗಮ್ಮ ಎನ್.ಟಿ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಎ.ವಿ. ಕಮಲಮ್ಮ ಕಾಲೇಜು, ದಾವಣಗೆರೆಯ ಡಾ. ಕವಿತಾ ಆರ್.ಜೆ ಅವರು ನಿರೂಪಿಸಿದರು.



ಈ ಶಿಬಿರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿ ನಾಯಕತ್ವ, ವ್ಯಕ್ತಿತ್ವ ವಿಕಾಸ ಹಾಗೂ ಸಮಾಜ ಸೇವೆಗೆ ಸಂಬಂಧಿಸಿದ ತರಬೇತಿಯನ್ನು ಪಡೆಯಲಿದ್ದಾರೆ.

161
2339 views

Comment