ಮೋಳೆ ಗ್ರಾಮದ ಗಣ್ಯ ವ್ಯಕ್ತಿಗಳು ಹಾಗೂ ಸಮಾಜಕ್ಕೆ ಬೇಕಾದ ವ್ಯಕ್ತಿಗಳಿಂದ ಕಲ್ಲಂಗಡಿ ಕಳ್ಳತನ! ❌ ಕಲ್ಲಂಗಡಿ ಕಳ್ಳರು ❌
ನಾನು ಮಹೇಶ್ ಭಜಂತ್ರಿ ಮೋಳೆ ಬಸ್ ಸ್ಟ್ಯಾಂಡದಲ್ಲಿ ಪ್ರತಿದಿನ ಕಲ್ಲಂಗಡಿ ಹಣ್ಣುಗಳನ್ನು ಮಾರುತಿರುತ್ತೇನೆ ಇದು ತಮಗೆಲ್ಲರಿಗೂ ಗೊತ್ತಿರುವ ವಿಷಯ. ಏಪ್ರಿಲ್ 3 2026 ರಂದು ಸುಮಾರು 11:50 ರಿಂದ 12 ಗಂಟೆಗೆ ಮಂಗಸೂಳಿ ಕಡೆಯಿಂದ ಒಂದು ಬಿಳಿ ಬಣ್ಣದ ಕಾರು, ಅದರಲ್ಲಿ ನಮ್ಮೂರಿನ 4-5 ಜನ ಯುವಕರಿದ್ದರು ಅವರು ನನ್ನ ಗಾಡಿಯಲ್ಲಿ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಯವಿಟ್ಟು ಈ ರೀತಿ ಯಾರು ಕಳ್ಳತನ ಮಾಡಬೇಡಿ ಏಕೆಂದರೆ ನಾವು ವ್ಯಾಪಾರಸ್ಥರು ಸಾಲ ಮಾಡಿ ವ್ಯಾಪಾರ ಮಾಡಿ ಬಂದಂತಹ ಹಣದಿಂದ ಜೀವನ ಸಾಗಿಸುತ್ತಿದ್ದೇವೆ.
ನಿಮ್ಮ ಹತ್ತಿರ ಹಣ ಇರದಿದ್ದರೆ ನಾವು ಉಚಿತವಾಗಿ ಕೊಡುತ್ತೇವೆ ಆದರೆ ಯಾವುದೇ ಕಾರಣಕ್ಕೂ ಕಳ್ಳತನ ಮಾಡಿ ನಮ್ಮಂತಹ ಬಡ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ತಮ್ಮಲ್ಲಿ ಕಳಕಳಿಯ ವಿನಂತಿ.
🤦♂️ಅವರು ನಮ್ಮ ಊರಿನವರಾಗಿರುವುದು ನನಗೆ ನೋವನ್ನುಂಟು ಮಾಡಿದೆ🤦♂️
🙏🚩ಕಾಳಿಕಾ ದೇವಿ🚩ಆ ಕಲ್ಲಂಗಡಿ ಕಾಯಿ ಕಳ್ಳರ ಆತ್ಮವನ್ನು ಖುಷಿಯಿಂದ ಇಡಲಿ 🙏