ಮಾರ್ಚ್ಬ 26ರಂದು ಬೀದರ ನಲ್ಲಿ ಜಗನ್ಮಾತೆ ಶ್ರೀ ಕಾಳಿಕಾದೇವಿ 23ನೇ ಜಾತ್ರಾ ಪಲ್ಲಕ್ಕಿ ಉತ್ಸವ ಅದ್ಧೂರಿ
ಮಾರ್ಚ್ಬ 26ರಂದು ಬೀದರ ನಲ್ಲಿ ಜಗನ್ಮಾತೆ ಶ್ರೀ ಕಾಳಿಕಾದೇವಿ 23ನೇ ಜಾತ್ರಾ ಪಲ್ಲಕ್ಕಿ ಉತ್ಸವ ಅದ್ಧೂರಿ
ಬೀದರ್, ಮಾ.25:
ಬೀದರ್ ನಗರದ ದೇವಿ ಕಾಲೋನಿಯಲ್ಲಿರುವ ಜಗನ್ಮಾತೆ ಶ್ರೀ ವಿಶ್ವಕರ್ಮ ಕಾಳಿಕಾದೇವಿಯ 23ನೇ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಜರುಗಲಿದೆ.
ಶಾಲಿವಾಹನ ಶಕ 1947ರ ಪಾಲ್ಗುಣ ಬಹಳ ಚತುರ್ದಶಿಯಿಂದ ಆರಂಭಗೊಂಡ ಈ ಜಾತ್ರಾ ಮಹೋತ್ಸವವು ಮಾರ್ಚ್ 17ರಿಂದ ಆರಂಭವಾಗಿ ಮಾರ್ಚ್ 26ರವರೆಗೆ ನಡೆಯುತ್ತಿದ್ದು, ಚೈತ್ರ ಶುದ್ಧ ಅಷ್ಟಮಿಯಂದು ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಮಾಪ್ತಿಯಾಗಲಿದೆ.
ಜಾತ್ರಾ ಅಂಗವಾಗಿ ಪ್ರತಿದಿನ ಮಹಾಪಂಚಾಮೃತ ಅಭಿಷೇಕ, ದೀಪಾರಾಧನೆ, ಲಲಿತಾ ಸಹಸ್ರನಾಮ ಪಠಣ, ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ. ಮಾರ್ಚ್ 25ರಂದು ಬೆಳಿಗ್ಗೆ 8:30ಕ್ಕೆ ಮಹಾಯಜ್ಞ ಹೋಮ ಕಾರ್ಯಕ್ರಮ ನೆರವೇರಲಿದೆ
ದಿನಾಂಕ 26ರಂದು ಪಲ್ಲಕ್ಕಿ ಮೆರವಣಿಗೆ ನ್ಯೂಟನ್ ಪೊಲೀಸ್ ಠಾಣೆ ಹಿಂದಿರುವ ಶಿವಮಂದಿರದಿಂದ ಆರಂಭವಾಗಿ ಗುರುನಾನಕ ಕಮಾನ್, ಭವಾನಿ ಮಂದಿರ ಮಾರ್ಗವಾಗಿ ದೇವಿ ಕಾಲೋನಿಯ ದೇವಸ್ಥಾನಕ್ಕೆ ಸಾಗಲಿದೆ. ಕುಂಭಕಳಸ ಹೊತ್ತ ಮಹಿಳೆಯರು, ಕೋಲಾಟ ಹಾಗೂ ವಿವಿಧ ಕಲಾತಂಡಗಳೊಂದಿಗೆ ಭಕ್ತಿಭಾವದಿಂದ ಮೆರವಣಿಗೆ ನಡೆಯಲಿದೆ. ಬಳಿಕ ಮಹಾಮಂಗಳಾರತಿ ನೆರವೇರಿಸಿ ದೇವಿಯ ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಮಹಾಪ್ರಸಾದ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಗಳು ಶ್ರೀ ಶ್ರೀನಿವಾಸ ಮಹಾಸ್ವಾಮಿಗಳು (ವಿಶ್ವಕರ್ಮ ಏಕದಂಡಿಗೆ ಮಠ, ಯಾದಗಿರಿ–ಹುಮನಾಬಾದ್–ಬಸವಕಲ್ಯಾಣ) ಅವರ ನೇತೃತ್ವದಲ್ಲಿ, ಶ್ರೀ ಮಹದೇವ್ ಆಚಾರ್ಯರು, ಶ್ರೀ ಹನುಮಂತರಾವ್ ಆಚಾರ್ಯರು ಹಾಗೂ ಶ್ರೀ ಕೃಷ್ಣ ಆಚಾರ್ಯರು ಅವರ ಸಮ್ಮುಖದಲ್ಲಿ ಜರುಗುತ್ತಿವೆ.
ದೇವಸ್ಥಾನದ ಅಧ್ಯಕ್ಷ ಶ್ರೀ ಕಮಲಾಕರ್ ವಿಶ್ವಕರ್ಮ, ಬೀದರ್ ಜಿಲ್ಲಾ ಅಧ್ಯಕ್ಷ ಶ್ರೀ ಮಹೇಶ್ ಪಂಚಾಳ, ಶ್ರೀ ಮೌನೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀ ನಾರಾಯಣ ವಿಶ್ವಕರ್ಮ, ಶ್ರೀ ಧರ್ಮವರ್ಧನಿ ಸಂಘದ ಅಧ್ಯಕ್ಷ ಶ್ರೀ ಶ್ರೀನಿವಾಸ್ ವಿಶ್ವಕರ್ಮ, ಬೀದರ್ ಜಿಲ್ಲಾ ಕಾರ್ಪೆಂಟರ್ ಅಧ್ಯಕ್ಷ ಶ್ರೀ ಸುರೇಶ್ ಪಂಚಾಳ, ಕಾರ್ಯಧ್ಯಕ್ಷ ಶ್ರೀ ಈಶ್ವರ ವಿಶ್ವಕರ್ಮ, ಬೀದರ್ ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಕಲಾ ವಿಶ್ವಕರ್ಮ, ಬೀದರ್ ಜಿಲ್ಲಾ ವಿಶ್ವಕರ್ಮ ಮಹಿಳಾ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ವಿಶ್ವಕರ್ಮ, ಕಾರ್ಯದರ್ಶಿ ಶ್ರೀ ವಿಜಯಕುಮಾರ, ಸಹ ಕಾರ್ಯದರ್ಶಿ ಶ್ರೀ ಬಾಬುರಾವ್ ಚಂಬೋಳ, ಖಜಾಂಚಿ ಶ್ರೀ ವಿಠಲರಾವ್ ವಿಶ್ವಕರ್ಮ ಸೇರಿದಂತೆ ಬಕ್ಕಪ್ಪ ವಿಶ್ವಕರ್ಮ, ಮಾರುತಿ, ಶಿವರಾಜ್, ಪ್ರಭಾಕರ್, ರಮೇಶ್ ಜಂಪಾಡ, ದಯಾನಂದ, ಸಂಜುಕುಮಾರ್, ವಿಶ್ವನಾಥ್, ಸೂರ್ಯಕಾಂತ್, ಶ್ರೀಮತಿ ರಾಜೇಶ್ವರಿ, ಸುವರ್ಣ, ಕಾವೇರಿ, ಇಂದೂಮತಿ, ಸುಮಂಗಲ, ಸುಜಾತ, ಲಕ್ಷ್ಮಿ, ವಿಜಯಲಕ್ಷ್ಮಿ, ಪ್ರಿಯಾಂಕಾ, ಸವಿತಾ, ಅನುರಾಧ, ಉಷಾ ಸುಲಕ್ಷಣಾ ಮತ್ತಿತರರು ಉತ್ಸವದ ವ್ಯವಸ್ಥೆಯಲ್ಲಿ ತೊಡಗಿದ್ದಾರೆ.
ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕಾಳಿಕಾದೇವಿಯ ದರ್ಶನ ಪಡೆದು ಪುನೀತರಾಗುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವಕರ್ಮ ಶಿವಾನಂದ ಎಸ್ ಮನವಿ ಮಾಡಿದ್ದಾರೆ.