ಪುರಿಯಲ್ಲಿ ಸಂಸ್ಕೃತ ಮತ್ತು ಬ್ರಾಹ್ಮಣ ಭವನಕ್ಕೆ ಭೂಮಿ ಪೂಜೆ
ಪುರಿಯಲ್ಲಿ ಸಂಸ್ಕೃತ ಮತ್ತು ಬ್ರಾಹ್ಮಣ ಭವನಕ್ಕೆ ಭೂಮಿ ಪೂಜೆ
ಪುರಿ (ಒರಿಸ್ಸಾ): ದಿನಾಂಕ ೨೧.೦೩.೨೦೨೬ ರಂದು ಒರಿಸ್ಸಾದ ಪುರಿ ಕ್ಷೇತ್ರದಲ್ಲಿ 'ಲೋಕಭಾಷಾ ಪ್ರಚಾರ ಸಮಿತಿ' ವತಿಯಿಂದ ನಿರ್ಮಿಸಲಾಗುತ್ತಿರುವ ಸಂಸ್ಕೃತ ಭವನ ಹಾಗೂ ಬ್ರಾಹ್ಮಣ ಭವನದ ಭೂಮಿ ಪೂಜೆ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ಪುತ್ತಿಗೆ ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭೂಮಿ ಪೂಜೆ ನೆರವೇರಿಸಿ ಆಶೀರ್ವದಿಸಿದರು. ಲೋಕಭಾಷಾ ಪ್ರಚಾರ ಸಮಿತಿಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಡಾ. ಸದಾನಂದ ದೀಕ್ಷಿತರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು.