ಹೆಸರೂರ್ ಶರಣಬಸವೇಶ್ವರ ಜಾತ್ರಾ ಮಹೋತ್ಸವ
ಸಡಗರದ ಜಾತ್ರಾ ಮಹೋತ್ಸವ
ಕುಷ್ಟಗಿ ತಾಲೂಕಿನ ಹೆಸರೂರ ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಲಘು ರಥೋತ್ಸವ ಜರುಗಿತು
ತಾಲೂಕಿನ ಹೆಸರೂರ ಗ್ರಾಮದಲ್ಲಿ 33ನೇ ವರ್ಷದ ಶರಣ ಬಸವೇಶ್ವರ ದೇವರ ಪುರಾಣ ಮಂಗಲೋತ್ಸವ ಹಾಗೂ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಲಘು ರಥೋತ್ಸವ ಸಡಗರ-ಸಂಭ್ರಮದಿಂದ ಜರುಗಿತು.
ಜಾತ್ರಾ ನಿಮಿತ್ತ ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಶರಣ ಬಸವೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ಮಹಾ ಅಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಪುನಸ್ಕಾರ ಜರುಗಿದವು. ಭಕ್ತರು ಹರಕೆ ಮುಟ್ಟಿಸಿದರು.ಸಂಜೆ ಲಘು ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ
ಹಲವರು ಚಾಲನೆ ನೀಡಿದರು.
ಭಕ್ತರು ಜಯಘೋಷ ಹಾಕುತ್ತಾ ಭಜನೆ, ಡೊಳ್ಳು, ಸಂಗೀತ ವಾದ್ಯಗಳ ವೈಭವದಿಂದ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಮಂಡಕ್ಕಿ ಸಮರ್ಪಿಸಿದರು. ಮಹಿಳೆಯರು ಕಳಸ ಹಿಡಿದುಕೊಂಡು ನಡೆದರು.
ಶರಣ ಬಸವೇಶ್ವರ ದೇವರ ಲಘು ರಥೋತ್ಸವ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ನೆರೆದಿರುವ ಭಕ್ತರು ಚಪ್ಪಾಳೆ ತಟ್ಟಿ ಭಕ್ತಿ ಮೆರೆದರು. ಜಾತ್ರಾಮಹೋತ್ಸವಕ್ಕೆ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.