logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಂಬೇಡ್ಕರ್ 135ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಪರಶುರಾಮ ಒಡೆಯರ್ ಆಯ್ಕೆ

ಯಾದಗಿರಿ: ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಆಚರಿಸಲು ಯಾದಗಿರಿಯಲ್ಲಿ ಜಯಂತೋತ್ಸವ ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಪರಶುರಾಮ ಒಡೆಯರ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಸಭೆಯಲ್ಲಿ ಎಲ್ಲಾ ಹಿರಿಯರ ಸಹಮತದಿಂದ ಸಮಿತಿಯ ಗೌರವ ಅಧ್ಯಕ್ಷರಾಗಿ ವೀರಭದ್ರಪ್ಪ ಯಡ್ಡಿಳ್ಳಿ, ಉಪಾಧ್ಯಕ್ಷರಾಗಿ ಗಂಗಿಮಾಳಮ್ಮ, ಮಂಜುನಾಥ ದಾಸನಕೇರಿ, ಶ್ರೀಕಾಂತ ಸುಂಗಲಕರ್ ಹಾಗೂ ಸುಭಾಷ್ ವಾಡಿ, ಮಂಜುನಾಥ ಗುರಸಣಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕಾಶೀನಾಥ್ ನಾಟೇಕಾರ್, ಸಹ ಕಾರ್ಯದರ್ಶಿಯಾಗಿ ಪ್ರಜ್ವಲ್ ಸಾಗರ ಕುರಕುಂಬಳಕರ್, ಖಜಾಂಚಿಯಾಗಿ ಅರುಣ್ ಕುಮಾರ ದಾಸನಕೇರಿ ಹಾಗೂ ಸಹ ಖಜಾಂಚಿಯಾಗಿ ಭೀಮಾಶಂಕರ ಅರಿಕೇರಿ ಅವರನ್ನು ನೇಮಕ ಮಾಡಲಾಗಿದೆ.
ಡಾ. ಭಗವಂತ ಅನ್ವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಹಿರಿಯ ಮುಖಂಡರಾದ ಮರೆಪ್ಪ ಚಟ್ಟೇರಕರ್, ಗೋಪಾಲ ತೇಳಗೇರಿ, ಶರಣು ಎಸ್. ನಾಟೇಕಾರ್, ಮಲ್ಲಿಕಾರ್ಜುನ ಈಟೇ, ಸಾಮದೇವ ದಾಸನಕೇರಿ, ವಿಜಯ ಶಿರಗೋಳ, ನರೇಂದ್ರ ಕುಮಾರ್ ಅನ್ವಾರ, ಸೇರಿದಂತೆ ನಗರದ ಯುವಕರು ಮತ್ತು ಹಲವರು ಭಾಗವಹಿಸಿದ್ದರು.

0
144 views

Comment